ರಾಜಸ್ಥಾನ : ಸಾವು ಬದುಕಿನ ನಡುವೆ ನರಳುತ್ತಿದ್ದ ಮಹಿಳೆಯನ್ನು ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಿದ ಸಂದರ್ಭ ಆಂಬುಲೆನ್ಸ್ ಬಾಗಿಲು ಓಪನ್ ಆಗದೆ ಮೃತಪಟ್ಟ ಘಟನೆ ರಾಜಸ್ಥಾನದ ಭಿಲ್ವಾರದಲ್ಲಿ ನಡೆದಿದೆ.
ಇಲ್ಲಿನ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ಗಮನಿಸಿದ ಮನೆಯವರು ಅವರನ್ನು ರಕ್ಷಿಸಿ ಆಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆ ತಲುಪಿದ ವೇಳೆ ಆಂಬುಲೆನ್ಸ್ ಬಾಗಿಲು ಏನು ಮಾಡಿದರೂ ಓಪನ್ ಆಗಲೇ ಇಲ್ಲ. ಬಳಿಕ ಕಿಟಕಿ ಮೂಲಕ ಆಕೆಯನ್ನು ಹೊರಗೆ ತೆಗೆಯಲಾಯಿತು. ಅಷ್ಟೊತ್ತಿಗಾಗಲೆ ೧೫ ನಿಮಿಷ ಕಳೆದಿತ್ತು, ಅಸ್ವಸ್ಥಗೊಂಡಿದ್ದ ಮಹಿಳೆಯ ಪ್ರಾಣಪಕ್ಷಿಯೂ ಹಾರಿಹೋಗಿತ್ತು. ಆಂಬುಲೆನ್ಸ್ ಒಳಗೆ ಆಕ್ಸಿಜನ್ ವ್ಯವಸ್ಥೆಯೂ ಸರಿಯಾಗಿ ಇರಲಿಲ್ಲ ಅಂತ ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಅಚಾತುರ್ಯಕ್ಕೆ ಏನನ್ನಬೇಕೋ ಗೊತ್ತಿಲ್ಲ. ಆ ಮಹಿಳೆ ಏನನ್ನು ಬಯಸಿದ್ದಳೋ ಅದಕ್ಕೇ ಜಯವಾಗಿದೆ ಅಂದುಕೊಳ್ಳಬೇಕೋ, ಸಾಯಲು ಮನಸ್ಸು ಮಾಡಿದ್ದ ಮಹಿಳೆಯನ್ನು ರಕ್ಷಿಸಲು ಮುಂದಾದ್ರೂ ಈ ಅಚಾತುರ್ಯದಿಂದ ಬದುಕಿಸಲಾಗಲಿಲ್ಲ ಅಂತ ಕುಟುಂಬಸ್ಥರು ಶಪಿಸಬೇಕೋ… ಓದುಗರ ವಿವೇಚನೆಗೆ ಬಿಡುತ್ತೇನೆ.
