Tuesday, June 9, 2026
Homeಜಿಲ್ಲಾಸುದ್ದಿMLA Nayana Motamma Help: ಕಾರು ಅಪಘಾತದಲ್ಲಿ ಗಾಯಕ್ಕಿಡಾದ ಯುವಕರಿಗೆ ಸಹಾಯ: ಶಾಸಕಿಗೆ ಹಾರ್ಮಕ್ಕಿ ಗ್ರಾಮಸ್ಥರಿಂದ...

MLA Nayana Motamma Help: ಕಾರು ಅಪಘಾತದಲ್ಲಿ ಗಾಯಕ್ಕಿಡಾದ ಯುವಕರಿಗೆ ಸಹಾಯ: ಶಾಸಕಿಗೆ ಹಾರ್ಮಕ್ಕಿ ಗ್ರಾಮಸ್ಥರಿಂದ ಧನ್ಯವಾದ ಅರ್ಪಣೆ

ಮೂಡಿಗೆರೆ: ತಾಲೂಕಿನ ಬಾಳೂರು ಹೋಬಳಿ ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ನಡುರಸ್ತೆಯಲ್ಲೇ ಬಿದ್ದು ನರಳಾಡುತ್ತಿದ್ದ ಹಾರ್ಮಕ್ಕಿ ಗ್ರಾಮದ ಪ್ರಪುಲ್, ಕಿರಣ್ ಎಂಬುವರನ್ನು ಕಂಡು ಕಾರು ನಿಲ್ಲಿಸಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ‌‌‌ ಕೊಡಿಸಿದ್ದು . ಸ್ಥಳದಿಂದಲೇ ಆಸ್ಪತ್ರೆ ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ಸೂಕ್ತ ಚಿಕಿತ್ಸೆಗೆ ಮನವಿ ಮಾಡಿದ್ದರು. ಶಾಸಕರ ನಡೆಗೆ ಮೆಚ್ಚುಗೆ ವ್ಯಕ್ತವಾಗಿತ್ತು ಈ ಹಿನ್ನಲೆ ಗಾಯಳು ಪೋಷಕರು, ಸ್ನೇಹಿತರು, ಗ್ರಾಮಸ್ಥರು ಸೇರಿ ಶಾಸಕಿ ನಯನಾ ಮೋಟಮ್ಮ ಅವರ ಮನೆಗೆ ಭೇಟಿ ನೀಡಿ ಗೌರವ ಸಮರ್ಪಿಸಿ, ಧನ್ಯವಾದ ಅರ್ಪಿಸಿದ್ದಾರೆ

ತಮ್ಮ ಕೆಲಸದ ನಿಮಿತ್ತ ಮೂಡಿಗೆರೆ ಕೊಟ್ಟಿಗೇಹಾರ ಬಾಳೂರು ಮಾರ್ಗವಾಗಿ ತೆರಳುತ್ತಿದ್ದ ಶಾಸಕಿ
ಬಾಳೂರು ಬಳಿ ಕಾರು ಮರಕ್ಕೆ ಹೊಡೆದು ಸವಾರ ಹಾಗೂ ಆತನ ಸ್ನೇಹಿತ ಗಾಯಗೊಂಡಿದ್ದರು. ರಕ್ತಸ್ರಾವದಿಂದ ನಡುರಸ್ತೆಯಲ್ಲೇ ನರಳಾಡುತ್ತಿದ್ದರು ಇದನ್ನು ಗಮನಿಸಿದ ಶಾಸಕಿ ಖುದ್ದಾಗಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದು ಈ ಹಿಂದೆ ಸುದ್ದಿ ಯಾಗಿತ್ತು ಇದೀಗ ಗಾಯಳುಗಳು ಸಂಪೂರ್ಣ ಚೇತರಿಕೆ ಖಂಡಿದ್ದು ಈ ಹಿನ್ನಲೆ ಶಾಸಕರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಗೌರವಿಸಲಾಗಿದೆ ಎಂದು ಹಾರ್ಮಕ್ಕಿ ಗ್ರಾಮದ ಚಿರಾಗ್ ತಿಳಿಸಿದ್ದಾರೆ

ಈ ಸಂದರ್ಭದಲ್ಲಿ.ಕಾಂಗ್ರೆಸ್ ಮುಖಂಡ ಶಂಕರ್ ಚಿಕ್ಕಳ,ಕಾಂಗ್ರೇಸ್ ಯುವ ಮುಖಂಡ ನಿಶಾಂತ್ ಸತ್ತಿಗನಹಳ್ಳಿ, ಸ್ವರೂಪ್ ಗೌಡ,ಗ್ರಾಮಸ್ಥರಾದ ದೀಪನ್ ಕಣಚೂರು, ಅಕ್ಷಯ್ ಹಾರ್ಮಕ್ಕಿ, ಜೀವನ್ ,ರಕ್ಷಿಯ್ ,ಮತ್ತಿತರರು ಇದ್ದರು

ವರದಿ:ಪುನೀತ್ ಕಡಿದಾಳು

9483811948
6361769518

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!