ಮುಂಬೈ : ಜನವರಿ 16ರಂದು ಆಗಂತುಕನಿಂದ ಚಾಕು ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಅವರು ಮನೆಗೆ ಮರಳಿದ್ದು, ಅವರ ನಿವಾಸಕ್ಕೆ ಟೈಟ್ ಸೆಕ್ಯೂರಿಟಿ ಒದಗಿಸಲಾಗಿದೆ.
ಸೈಫ್ಗೆ ಎರಡುಸರ್ಜರಿ ಮಾಡಲಾಗಿದೆ. ಬೆನ್ನಿನಲ್ಲಿ ಇದ್ದ ಚಾಕುವಿನ ಭಾಗವನ್ನು ಹೊರಗೆ ತೆಗೆಯಲಾಗಿದೆ. ಕುತ್ತಿಗೆ ಭಾಗದ ಗಾಯಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಐದು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಈಗ ಮನೆಗೆ ಮರಳಿದ್ದಾರೆ. ಸದ್ಯ ಅವರ ಆರೋಗ್ಯದಲ್ಲಿ ಬಹುತೇಕ ಚೇತರಿಕೆ ಕಂಡಿದೆ ಎನ್ನಲಾಗಿದೆ.
ಘಟನೆ ಬಳಿಕ ಸೈಫ್ ಅಭಿಮಾನಿಗಳು ಆತಂಕದಲ್ಲಿದ್ದರು. ಅವರ ಆರೋಗ್ಯ ಹೇಗಿದೆ, ಘಟನೆಯಿಂದ ಅವರ ಮಾನಸಿಕ ಸ್ಥಿತಿಗತಿ ಹೇಗಿದೆ ಅಂತೆಲ್ಲ ಯೋಚಿಸುತ್ತಿದ್ದರು. ಆದರೆ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳುವ ವೀಡಿಯೋ ಹರಿದಾಡುತ್ತಿದ್ದು, ನಗುಮೊಗದಿಂದ ಅಭಿಮಾನಿಗಳ ಕಡೆ ಕೈಬೀಸಿ ತೆರಳಿದ್ದಾರೆ. ಎರರು ಕೈನಿಂದ ಥಂಬ್ ಸಿಗ್ನಲ್ ಮಾಡಿ, ನಾನು ಫೈನ್ ಅನ್ನೋ ಸೂಚನೆ ಕೊಟ್ಟಿದ್ದಾರೆ.
