Tuesday, February 10, 2026
Homebig breakingಗಂಗಾಸ್ನಾನ ಮಾಡಿದ್ರೆ ಪಾಪ ಹೋಗೋದಿಲ್ಲ - ಖರ್ಗೆ ಹೇಳಿಕೆ ಸಮರ್ಥಿಸಿದ ಸಂಚಿವ ಸಂತೋಷ್‌ ಲಾಡ್..!‌

ಗಂಗಾಸ್ನಾನ ಮಾಡಿದ್ರೆ ಪಾಪ ಹೋಗೋದಿಲ್ಲ – ಖರ್ಗೆ ಹೇಳಿಕೆ ಸಮರ್ಥಿಸಿದ ಸಂಚಿವ ಸಂತೋಷ್‌ ಲಾಡ್..!‌

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಗಂಗಸ್ನಾನ ಮಾಡಿದ ತಕ್ಷಣ ಅವರು ಮಾಡಿದ ಪಾಪ ಹೋಗುವುದಿಲ್ಲ ಎಂಬ ಹೇಳಿಕೆಗೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಧ್ವನಿಗೂಡಿಸಿದ್ದಾರೆ. ದೇಶದ ವ್ಯವಸ್ಥೆ ಹಾಳು ಮಾಡಿರುವುದು ಪಾಪವಲ್ಲವೇ? ಆ ಪಾಪ ಗಂಗಾಸ್ನಾನ ಮಾಡುವುದರಿಂದ ಹೋಗಲು ಸಾಧ್ಯವೇ? ಎಂದು ಸಚಿವ ಸಂತೋಷ ಲಾಡ್ ಪ್ರಶ್ನಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ದೇಶದ ಆರ್ಥಿಕ ವ್ಯವಸ್ಥೆ ಮೂಲೆಗುಂಪಾಗಿದೆ. ಲಕ್ಷಾಂತರ ಕಿರಾಣಿ ಅಂಗಡಿಗಳು ಬಂದ್‌ ಆಗಿವೆ. ಈ ಬಗ್ಗೆ ಯಾರಾದರೂ ಮಾತನಾಡುತ್ತಾರಾ? ಖರ್ಗೆ ಅವರು ನೀಡಿರುವ ಹೇಳಿಕೆ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯವರು ದೇಶದ ಸಾಲದ ಬಗ್ಗೆ ಏಕೆ ಮಾತನಾಡೋಡಿಲ್ಲ.? ಗಂಗಾ ಸ್ನಾನ ಮಾಡಿದರೆ ಪಾಪ ಕಳೆದುಹೋಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆ ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.
ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಹಿಂದೂ-ಮುಸ್ಲಿಂ ಭಾವನಾತ್ಮಕತೆ ಕುರಿತು ಮಾತನಾಡುವುದನ್ನು ಬಿಟ್ಟರೆ ಏನು ಇರುವುದಿಲ್ಲ. ಬಿಜೆಪಿಯವರದ್ದು ಈಗ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವಂತಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಕರೆ ತರುವ ಕುರಿತಂತೆ ನನಗೇನೂ ಟಾಸ್ಕ್ ಕೊಟ್ಟಿಲ್ಲ. ನಮ್ಮ ಪಕ್ಷ ಡಬಲ್ ಡೆಕ್ಕರ್ ಬಸ್ ಇದ್ದಂತೆ. ಇಲ್ಲಿಗೆ ಯಾರಾದರೂ ಬರಬಹುದು; ಹೋಗಬಹುದು ಎಂದ ಅವರು, ನಾನು ಮತ್ತು ಮಾಜಿ ಸಚಿವ ಶ್ರೀರಾಮುಲು ಉತ್ತಮ ಸ್ನೇಹಿತರು. ಇತ್ತೀಚಿನ ದಿನಗಳಲ್ಲಿ ನಾನು ಅವರೊಂದಿಗೆ ಮಾತನಾಡಿಲ್ಲ. ಅವರು ಕಾಂಗ್ರೆಸ್‌ಗೆ ಬಂದರೆ ಸ್ವಾಗತಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!