Wednesday, August 12, 2026
Homeಜಿಲ್ಲಾಸುದ್ದಿಚಿಕ್ಕಮಗಳೂರಲ್ಲಿ ಕೆರೆಗೆ ಹಾರಿ ಬದುಕಿಸುವಂತೆ ಆಂಜನೇಯನನ್ನ ಬೇಡುತ್ತಿದ್ದ ಮಹಿಳೆ ರಕ್ಷಣೆ!

ಚಿಕ್ಕಮಗಳೂರಲ್ಲಿ ಕೆರೆಗೆ ಹಾರಿ ಬದುಕಿಸುವಂತೆ ಆಂಜನೇಯನನ್ನ ಬೇಡುತ್ತಿದ್ದ ಮಹಿಳೆ ರಕ್ಷಣೆ!

Telegram Group
Join Now

ಚಿಕ್ಕಮಗಳೂರು: ಪತಿ ಜೊತೆ ಜಗಳವಾಡಿ ಕೆರೆಗೆ ಹಾರಿ ಬದುಕಿಸುವಂತೆ ಆಂಜನೇಯನನ್ನ ಬೇಡುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಘಟನೆ ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರದಲ್ಲಿ ನಡೆದಿದೆ

ಗಂಡನ ಜೊತೆ ಜಗಳವಾಡಿ ರಾಮನಹಳ್ಳಿ ನಿವಾಸಿ ರಂಜಿತಾ (35) ಕೆರೆಗೆ ಹಾರಿದ್ದರು. ಸಾಯಬೇಕು ಎಂದು ಕೆರೆಗೆ ಹಾರಿದ ಬಳಿಕ ಆಂಜನೇಯ ಕಾಪಾಡು.. ಆಂಜನೇಯ ಕಾಪಾಡು ಎಂದು ಪ್ರಾರ್ಥನೆ ಮಾಡುತ್ತಿದ್ದರು.

ಕೆರೆಯಲ್ಲಿ ಯಾರೋ ಇರುವುದನ್ನು ನೋಡಿ ಪಕ್ಕದ ಹೋಂ ಸ್ಟೇ ಮಾಲೀಕ ರಮೇಶ್ ಸ್ಥಳಕ್ಕೆ ಬಂದು ಹುಡುಗರ ಕರೆಸಿದ್ದಾರೆ. ಬಳಿಕ ಕೆರೆಯಲ್ಲಿ ಮುಳುಗುತ್ತಿದ್ದ ರಂಜಿತಾಳನ್ನು ಸುಮಂತ್, ಪ್ರಸನ್ನ ರಕ್ಷಿಸಿದ್ದಾರೆ.ಮಹಿಳೆ ಹಣೆಬರಹ ಗಟ್ಟಿ ಇತ್ತು ಅನ್ಸತ್ತೆ, ನೀರಿಗೆ ಬಿದ್ದು ನರಳಾಡಿದ್ರೂ ಬದುಕಿದ ಮಹಿಳೆ.

ಘಟನೆ ಸಂಬಂಧ ಚಿಕ್ಕಮಗಳೂರು ನಗರದ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments