Tuesday, February 10, 2026
Homeಜಿಲ್ಲಾಸುದ್ದಿಬಿಜೆಪಿಯವರ ಜನ ವಿರೋಧ ನೀತಿಯನ್ನು ಕಾಂಗ್ರೆಸ್‌ ವಿರೋಧಿಸುತ್ತದೆ: ಕಿಮ್ಮನೆ ರತ್ನಾಕರ್!

ಬಿಜೆಪಿಯವರ ಜನ ವಿರೋಧ ನೀತಿಯನ್ನು ಕಾಂಗ್ರೆಸ್‌ ವಿರೋಧಿಸುತ್ತದೆ: ಕಿಮ್ಮನೆ ರತ್ನಾಕರ್!

ಚಿಕ್ಕಮಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ಆಡಳಿತ ಮತ್ತು ಆರ್ಥಿಕ ನೀತಿ ಶ್ರೀಮಂತರನ್ನು ಮಾಡುವ ಮತ್ತು ಮಧ್ಯಮ ವರ್ಗದವರನ್ನು ಬಡವರನ್ನಾಗಿ ಮಾಡುವ, ಬಡವರನ್ನು ಕಡುಬಡವರನ್ನಾಗಿಸಿ ಮತ್ತು ನಿರ್ಗತಿಕರನ್ನು ಮಾಡುವ ನೀತಿಯನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಅವರು ವಾಗ್ದಾಳಿ ನಡೆಸಿದರು.

ನಗರದ ಪ್ರೆಸ್‌ ಕ್ಲಬ್‌ ನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಸಭೆ ನಡೆಸಿದ ಅವರು ಆ ನಂತರ ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್ ಸರ್ವರನ್ನು ಎಲ್ಲಾ ಜಾತಿ, ಧರ್ಮದವರನ್ನು ಒಳಗೊಳ್ಳುವ ಶಾಂತಿ ನೆಮ್ಮದಿ ಅಹಿಂಸೆಯ ಜಾತ್ಯತೀತ ಬಹುತ್ವದ ಭಾರತವನ್ನು ಕಟ್ಟುವ ಮತ್ತು ದೇಶದಲ್ಲಿನ ಸಾಮಾಜಿಕ ಅಸಮಾನತೆ ಮತ್ತು ಶೈಕ್ಷಣಿಕ ಅಸಮಾನತೆಯನ್ನು ತೆಗೆದುಹಾಕಿ ಸಹಬಾಳ್ವೆಯ ವಾತಾವರಣವನ್ನು ನಿರ್ಮಿಸುವುದೇ ಕಾಂಗ್ರೆಸ್‌ ಪಕ್ಷದ ಮೂಲತತ್ವವಾಗಿದೆ ಎಂದರು.

ಹಾಗೆ ಗಾಂಧಿ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ನಾರಾಯಣಗುರು, ಜವಾಹರ್ ಲಾಲ್ ನೆಹರು ಪ್ರತಿಪಾದನೆ ಮಾಡಿದ, ಸಮಾಜವಾದಿ ಚಿಂತನೆಯ, ಜಾತ್ಯತೀತ ನಿಲುವಿನ ಬಾಬ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನ ಬದ್ಧ ಆಶಯಗಳಿಗೆ ಪೂರಕ ನೀತಿಯನ್ನು ಹೊಂದಿದೆ. ಬಿಜೆಪಿ ಮತ್ತು ಆರ್ ಎಸ್ ಎಸ್ ಪರಿವಾರದವರು ಮೇಲ್ಕಂಡ ಸಂವಿಧಾನ ಆಶಯಗಳಿಗೆ ವಿರುದ್ಧವಾದ ನಿಲುವನ್ನು ಹೊಂದಿದ್ದು ಇಂದಿನ ಬಿಜೆಪಿ ಕೇಂದ್ರ ಸರ್ಕಾರ ಹೆಗ್ಡೆವಾರ, ಗೋಳ್ಳಾವಳ್ಕರ್ ಗಾಂಧಿಹಂತಕ ನಾತುರಾಮ್ ಗೋಡ್ಸೆ ಬೆಂಬಲಿತ ಚಿಂತನ ಗಂಗಾ, ಕೃತಿಸಂಘ, ರೂಪದರ್ಶನದ ಸಂವಿಧಾನವನ್ನು ತಂತ್ರಗಾರಿಕೆಯ ಹಿಂಸೆಯನ್ನು ಪ್ರತಿಪಾದಿಸುವ ವಿಚಾರಧಾರೆಯನ್ನು ಅನುಷ್ಠಾನಗೊಳಿಸುವ ಕೇಂದ್ರದ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ವಿರೋಧಿಸುತ್ತದೆ. ಶ್ರೇಣಿಕೃತ ಸಮಾಜವನ್ನು ಸಮರ್ಥಿಸುವ ಮೀಸಲಾತಿಯನ್ನು ವಿರೋಧಿಸುವ ಸಂವಿಧಾನವನ್ನು ಬದಲಿಸುವ ದಲಿತ ಸಮಾಜದ ಅಸ್ಪೃಶ್ಯತೆಯನ್ನು ಉಳಿಸಿ ಮನುಷ್ಯನ ದೇಹದಿಂದ ಅವರನ್ನು ಹೊರಗಿಡುವ ದೇಶದ ಒಕ್ಕೂಟ ವ್ಯವಸ್ಥೆಯನ್ನು ರದ್ದು ಮಾಡಿ ದೇಶಕ್ಕೆ ಒಂದೇ ಸಂಸತ್ತು ಒಂದೇ ಭಾಷೆ ಒಂದೇ ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಉಳಿಸಿಕೊಂಡು ದೇಶದಲ್ಲಿನ ಎಲ್ಲಾ ರಾಜ್ಯ ಭಾಷೆಗಳ ಇತರೆ ನಾಲ್ಕು ಸಾವಿರ ಭಾಷೆಗಳು ಅಗತ್ಯವಿಲ್ಲ ಎಂದು ಹೇಳುವ ಮೂಲಕ ಇಂಗ್ಲೀಷನ್ನು ತೆಗೆದುಹಾಕಿ ಹಿಂದಿನ ರಾಷ್ಟ್ರ ಧ್ವಜವನ್ನು ತೆಗೆದುಹಾಕಿ ಚಿಂತನ ಗಂಗಾ ಪ್ರತಿಪಾದಿಸುವ ಭಗವಾ ಧ್ವಜವನ್ನು ರಾಷ್ಟ್ರಧ್ವಜವನ್ನು ಮಾಡಬೇಕು ಎಂದು ಉದ್ದೇಶದಿಂದ 52 ವರ್ಷ ಆರ್ ಎಸ್ ಎಸ್ ಕೇಂದ್ರ ಕಚೇರಿ ನಾಗಪುರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಿಲ್ಲ. ಬಿಜೆಪಿ ಮತ್ತು ಪರಿವಾರದವರು ಸಂವಿಧಾನ ಒಪ್ಪಿದರೆ ಚಿಂತನಗಂಗಾ, ಕೃತಿ ಸಂಗ, ರೂಪದರ್ಶಕ ವಿಚಾರಧಾರೆಯನ್ನು ತಿರಸ್ಕಾರ ಮಾಡಬೇಕು ಎರಡು ಒಂದಾಗಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದರು.

ಹಾಗೆ ಬಿಜೆಪಿಗೆ ರಾಷ್ಟ್ರದಲ್ಲಿ 360 ಸಂಸತ್ ಸದಸ್ಯರ ಆಯ್ಕೆಗೊಂಡ ದಿನ ದೇಶದ ನಮ್ಮ ಸಂವಿಧಾನವನ್ನು ತೆಗೆದುಹಾಕಿ ಚಿಂತನಾ ಗಂಗಾ ಮತ್ತು ಜನ ವಿರೋಧಿ ಮನುಷ್ಯತ್ವ ಮತ್ತು ಮಾನವೀಯತೆ ವಿರೋಧ ಕೃತಿ ಸಂಘ ರೂಪದರ್ಶನ ವಿಚಾರ ದಾರಿಯನ್ನು ಅನುಷ್ಠಾನಗೊಳಿಸುತ್ತಾರೆ. ಇಂದಿನ ಭಾರತದ ಸಂವಿಧಾನವನ್ನು ಈಗ ಬಿಜೆಪಿ ಸಮರ್ಥಿಸುವ ವಿಧಾನ ನಮ್ಮ ಗುರಿ ಮುಟ್ಟುವವರೆಗಿನ ಒಂದು ತಂತ್ರಗಾರಿಕೆ ಪ್ರಧಾನಮಂತ್ರಿ ಮೋದಿ ಅವರು ನವಿಲಿಗೆ ಹಾಕುವ ಕಾಳಿನ ಹಾಗೆ ಎಂದು ಬಿಜೆಪಿಗೆ ಕುಟುಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!