Tuesday, August 11, 2026
Homeಜಿಲ್ಲಾಸುದ್ದಿಬಾಳೆಹೊನ್ನೂರು: ಬನ್ನೂರಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ: ಅಪಾರ ಪ್ರಮಾಣದ ಬೆಳೆ ಹಾನಿ

ಬಾಳೆಹೊನ್ನೂರು: ಬನ್ನೂರಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ: ಅಪಾರ ಪ್ರಮಾಣದ ಬೆಳೆ ಹಾನಿ

Telegram Group
Join Now

ಎನ್‌. ಆರ್‌.ಪುರ: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಬನ್ನೂರಿನಲ್ಲಿ ಮತ್ತೆ ಕಾಡಾನೆಗಳ ಉಪಟಳ ಶುರುವಾಗಿದ್ದು ಭತ್ತದ ಗದ್ದೆಯನ್ನು ಹಾಳು ಮಾಡಿರುವ ಘಟನೆ ಬನ್ನೂರಿನಲ್ಲಿ ನಡೆದಿದೆ.

ಈಗಾಗಲೇ ಬನ್ನೂರು ಸಮೀಪದ ಕುಂಬ್ರುಮನೆ, ಅಂಡವಾನೆಯಲ್ಲಿ ಕಾಡಾನೆ ಉಪಟಳಕ್ಕೆ ವ್ಯಕ್ತಿಯೊಬ್ಬರು ಬಲಿಯಾಗಿದ್ದು ಆ ನಂತರ ಆನೆಗಳ ಹಾವಳಿಗೆ ಆತಂಕಿತರಾಗಿದ್ದ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿ ಉಪಟಳ ನಡೆಸಿದ ಕಾಡಾನೆಯನ್ನ ಸೆರೆಹಿಡಿದ ಬೆನ್ನಲ್ಲೇ ಮತ್ತೊಂದು ಕಾಡಾನೆ ಪ್ರತ್ಯಕ್ಷವಾಗಿದೆ

ತಡರಾತ್ರಿ ಬನ್ನೂರಿನ ಕೊಡುಗೆಯ ಕಿಟ್ಟಪ್ಪ ಗೌಡ ಎಂಬುವರಿಗೆ ಸೇರಿದ ಭತ್ತದ ಗದ್ದೆಯ ಸಸಿ ಅಗಡಿಯನ್ನು ಸಂಪೂರ್ಣವಾಗಿ ತುಳಿದು ಹಾಳು ಹಾಳು ಮಾಡಿದೆ, ಒಂದು ಆನೆಯನ್ನು ಸೆರೆ ಸೆರೆಹಿಡಿದರೂ ಬನ್ನೂರಿನ ಗ್ರಾಮಸ್ಥರಿಗೆ ಮತ್ತೊಂದು ಆನೆಯ ಉಪಟಳ ಶುರುವಾಗಿದೆ.

ಹೀಗಾಗಿ ಗ್ರಾಮಸ್ಥರೆಲ್ಲರೂ ಅರಣ್ಯಾಧಿಕಾರಿಗಳ ವಿರುದ್ಧ ಮತ್ತೆ ಕಿಡಿಕಾರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments