Sunday, February 15, 2026
Homeಜಿಲ್ಲಾಸುದ್ದಿಗೊರೂರು: ಹೇಮಾವತಿ ಜಲಾಶಯಕ್ಕೆ ಬರುವ ಒಳಹರಿವಿನಲ್ಲಿ ಭಾರೀ ಹೆಚ್ಚಳ!

ಗೊರೂರು: ಹೇಮಾವತಿ ಜಲಾಶಯಕ್ಕೆ ಬರುವ ಒಳಹರಿವಿನಲ್ಲಿ ಭಾರೀ ಹೆಚ್ಚಳ!

ಹಾಸನ: ಜಿಲ್ಲೆಯ ಮಲೆನಾಡಿನ ಭಾಗ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಬರುವ ಒಳಹರಿವಿನಲ್ಲಿ ಭಾರೀ ಏರಿಕೆಯಾಗಿದೆ.

ಜಲಾಶಯಕ್ಕೆ 32,087 ಕ್ಯೂಸೆಕ್ ಒಳಹರಿವು ಬರುತ್ತಿದೆ. ಆರು ಕ್ರಸ್ಟ್ ಗೇಟ್‍ಗಳ ಮೂಲಕ ನೀರು ಬಿಡುಗಡೆ ಮಾಡಲಾಗಿದ್ದು, ಜಲಾಶಯದ ಹೊರಹರಿವು 32,925 ಕ್ಯೂಸೆಕ್ ಇದೆ. 

ಜಲಾಶಯದ ಇಂದಿನ ನೀರಿನ ಮಟ್ಟ
ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ – 37.103 ಟಿಎಂಸಿ
ಸದ್ಯ ಜಲಾಶಯದಲ್ಲಿರುವ ನೀರು – 37.006ಟಿಎಂಸಿ
ಜಲಾಶಯದ ಗರಿಷ್ಠ ಮಟ್ಟ – 2922.00 ಅಡಿ
ಇಂದಿನ ನೀರಿನ ಮಟ್ಟ – 2921.90 ಅಡಿ
ಒಳಹರಿವು – 32087 ಕ್ಯೂಸೆಕ್
ಹೊರಹರಿವು – 32,925 ಕ್ಯೂಸೆಕ್

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!