Tuesday, February 17, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಸುರಿಯುತ್ತಿರುವ ಧಾರಾಕಾರ ಮಳೆಯ ನಡುವೆ ಕಾಡಾನೆಗಳ ದಾಂಧಲೆಗೆ ಜನ ಸುಸ್ತೋಸುಸ್ತು!

ಚಿಕ್ಕಮಗಳೂರು: ಸುರಿಯುತ್ತಿರುವ ಧಾರಾಕಾರ ಮಳೆಯ ನಡುವೆ ಕಾಡಾನೆಗಳ ದಾಂಧಲೆಗೆ ಜನ ಸುಸ್ತೋಸುಸ್ತು!

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಳ ಒಂದು ಕಡೆಯಾದ್ರೆ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು ಇದರಿಂದ ಜನರು ಸಾಕಷ್ಟು ಬೇಸತ್ತು ಹೋಗಿದ್ದಾರೆ ಎಂದರೆ ತಪ್ಪಾಗಲಾರದು.

ಚಿಕ್ಕಮಗಳೂರು ತಾಲೂಕಿನ ಐದಳ್ಳಿ ಗ್ರಾಮದಲ್ಲಿ ಒಂಟಿ ಆನೆಯೊಂದು ಉಪಟಳ ನೀಡಿದ್ದು ಫಸಲಿಗೆ ಬಂದಿದ್ದ ಅಡಿಕೆ, ಬಾಳೆ, ತೆಂಗಿನ ಮರಗಳನ್ನು ತುಳಿದು ನಾಶಪಡಿಸಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಓಡಾಟ ಇದ್ದಿದ್ದು ಈ ಆನೆಯ ಉಪಟಳಕ್ಕೆ ಜನರು ಬೇಸತ್ತು ಹೋಗಿದ್ದಾರೆ. ಹಾಗೆ ಇನ್ನೊಂದು ಕಡೆ ಮಲೆನಾಡಲ್ಲಿ ಭತ್ತದ ನಾಟಿಯೂ ಆರಂಭಗೊಂಡಿದ್ದು ಇದೇನಾಗುತ್ತೋ ಅಂಥ ಭಯದಲ್ಲೇ ಬದುಕುವ ರೀತಿ ಆಗಿದೆ.ಹಾಗೆ ಆನೆ ಉಪಟಳಕ್ಕೆ ಹೆದರಿ ಕಾರ್ಮೀಕರು ಕೂಡ ಕೆಲಸಕ್ಕೆ ಹೊರಡಲು ಹಿಂದೇಟು ಹಾಕುತ್ತಿದ್ದಾರೆ.

ಆಲ್ದೂರು ಅರಣ್ಯ ವ್ಯಾಪ್ತಿಯಲ್ಲಿ ತೋಟಗಳಿಗೆ ನುಗ್ಗಿ ಕಾಡಾನೆಗಳು ಉಪಟಳ ನೀಡಿದ್ದು ಇತ್ತೀಚೆಗೆ ಒಬ್ಬೊಬ್ಬರ ಮನೆಯ ತೋಟದ ಅತಿಥಿಯಾಗಿ ಬರುತ್ತಿದ್ದು ಅವರು ಬೆಳೆದ ಅಡಿಕೆ ಕಾಫಿ ಬಾಳೆ ತೋಟಗಳನ್ನು ತಿಂದು ಮೆಟ್ಟಿ ಹಾಳುಮಾಡಿ ಹೋಗುತ್ತಿದೆ. ಹೀಗಾಗಿ ಅಲ್ಲಿನ ಸ್ಥಳೀಯರು ಈಗ ತೋಟಕ್ಕೆ ಬಂದು ನಾಶ ಮಾಡುತ್ತಿದ್ದು ಆಮೇಲೆ ಯಾರ ಜೀವ ಹೋಗುತ್ತದೆಯೇ ಗೊತ್ತಿಲ್ಲ ಈ ಕೂಡಲೇ ಅರಣ್ಯಾಧಿಕಾರಿಗಳು ಎಚ್ಚೆತ್ತು ಕ್ರಮ ಕೈಗೊಳ್ಳಬೇಕಾಗಿ ಕಿಡಿ ಕಾರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!