Tuesday, February 17, 2026
Homeಜಿಲ್ಲಾಸುದ್ದಿಪರಿಹಾರದ ಹಣದ ಬಿಡುಗಡೆಗೆ ಆಗ್ರಹಿಸಿ ಕನ್ನಡ ಸೇನೆ ನೇತೃತ್ವದಲ್ಲಿ ಮೆಸ್ಕಾಂ ಇಲಾಖೆ ಅಧಿಕಾರಿ ಮನವಿ ಸಲ್ಲಿಕೆ!

ಪರಿಹಾರದ ಹಣದ ಬಿಡುಗಡೆಗೆ ಆಗ್ರಹಿಸಿ ಕನ್ನಡ ಸೇನೆ ನೇತೃತ್ವದಲ್ಲಿ ಮೆಸ್ಕಾಂ ಇಲಾಖೆ ಅಧಿಕಾರಿ ಮನವಿ ಸಲ್ಲಿಕೆ!

ಚಿಕ್ಕಮಗಳೂರು:  ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಕುಟುಂಬಕ್ಕೆ ಉಸ್ತುವಾರಿ ಸಚಿವರು ಘೋಷಿಸಿರುವ ಪರಿಹಾರದ ಹಣವನ್ನು ಬಿಡುಗಡೆ ಮಾಡಬೇಕು ಎಂದು ನೊಂದ ಕುಟುಂಬಸ್ಥರು ಕನ್ನಡ ಸೇನೆ ನೇತೃತ್ವದಲ್ಲಿ ಮೆಸ್ಕಾಂ ಇಲಾಖೆ ಅಧಿಕಾರಿ ಮಂಜುನಾಥ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಕಳೆದ ಜನವರಿ ತಿಂಗಳಿನಲ್ಲಿ ಕೂ ದುವಳ್ಳಿ ಗ್ರಾಮದ ಹೂವೇಗೌಡ ಎಂಬುವವರು ಕಾಫಿ ತೋಟದಲ್ಲಿ ತೆರಳುವಾಗ ವಿದ್ಯುತ್ ಸ್ಪರ್ಶಿಸಿ ಬಿದ್ದಿದ್ದು ಜಿಲ್ಲಾಸ್ಪತ್ರೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತರಾಗಿದ್ದರು ಎಂದರು.

ಅದೇ ಮರುದಿನ ಗಣರಾಜ್ಯೋತ್ಸವದಲ್ಲಿ ಉಸ್ತುವಾರಿ ಸಚಿವರು ಈ ಬಗ್ಗೆ ವಿಷಯ ತಿಳಿಸಿಕೊಂಡು ಮಾನವೀಯ ದೃಷ್ಟಿಯಿಂದ ೨ ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಆದರೆ ಇದಾದ ಬಳಿಕ ಪರಿಹಾರದ ಮೊತ್ತವನ್ನು ಪಡೆಯಲು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಆರೇಳು ತಿಂಗಳು ಕಳೆದರೂ ಅಧಿಕಾರಿಗಳು ಸಂ ಬಂಧವಿಲ್ಲದಂತೆ ವರ್ತಿಸಿ ಸತಾಯಿಸುತ್ತಿದ್ದಾರೆ ಎಂದು ತಿಳಿಸಿದರು.

ಈ ನಡುವೆ ಉಸ್ತುವಾರಿ ಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿದ ವೇಳೆಯಲ್ಲೂ ಪರಿಹಾರ ನೀಡಲು ಸೂ ಚಿಸಿದ್ದರು. ಈ ಕುರಿತು ಮೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಲ್ಲದೇ ಮೃತ ಕುಟುಂಬವು ತೀ ವ್ರ ಬಡವರಾದ ಕಾರಣ ಜೀವನಾಧಾರ ಕಷ್ಟವಾಗಿದೆ. ಅಲ್ಲದೇ ಅವರ ಮಗ ಅಪಘಾತಕ್ಕೀಡಾಗಿ ಕಾಲಿಗೆ ಗಂ ಭೀರವಾಗಿ ಗಾಯವಾಗಿದ್ದು ಜೀವನ ಸುಧಾರಿಸಿಕೊಳ್ಳುವುದು ಕಷ್ಟವಾಗಿದೆ ಎಂದರು.

ಹೀಗಾಗಿ ಮೆಸ್ಕಾಂ ಇಲಾಖೆ ನೊಂದ ಕುಟುಂಬದವರ ಜೀವನವು ತೀವ್ರ ಸಂಕಷ್ಟದಲ್ಲಿರುವ ಕಾರಣ ಇಂದಿನ ಆಧುನಿಕ ಜಗತ್ತಿನಲ್ಲಿ ಬದುಕಿಗಾಗಿ ಕನಿಷ್ಟ 15 ಲಕ್ಷ ರೂ.ಗಳ ಪರಿಹಾರ ಪೂರೈಸಬೇಕು. ಒಂದು ವೇಳೆ ಪರಿಹಾರ ಬಿಡುಗಡೆಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಮೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕನ್ನಡಸೇನೆ ಮುಖಂಡರುಗಳಾದ ಕಳವಾಸೆ ರವಿ, ಹುಣಸೇಮಕ್ಕಿ ಲಕ್ಷ್ಮಣ್, ಸುಜಾ ತ, ಚೈತ್ರ ಗೌಡ, ನೊಂದ ಕುಟುಂಬವರಾದ ವಿನೋದ, ಚಂದ್ರಶೇಖರ್, ಜನನಿ ಮತ್ತಿತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!