Thursday, September 24, 2026
Homeಜಿಲ್ಲಾಸುದ್ದಿಬೇಲೂರು: ನಾಯಿ ಬೊಗಳಿದ್ದಕ್ಕೆ ವಿಚಲಿತಗೊಂಡು ಕಾರನ್ನು ಎತ್ತಿ ಎಸೆದ ಒಂಟಿ ಸಲಗ!

ಬೇಲೂರು: ನಾಯಿ ಬೊಗಳಿದ್ದಕ್ಕೆ ವಿಚಲಿತಗೊಂಡು ಕಾರನ್ನು ಎತ್ತಿ ಎಸೆದ ಒಂಟಿ ಸಲಗ!

Telegram Group
Join Now

ಹಾಸನ: ನಾಯಿ ಬೊಗಳಿದ್ದಕ್ಕೆ ವಿಚಲಿತಗೊಂಡ ಒಂಟಿ ಸಲಗವೊಂದು ಆಲ್ಟೋ ಕಾರನ್ನು ಎತ್ತಿ ಎಸೆದ ಘಟನೆ ಬೇಲೂರಿನ ಅರೇಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದೊಳಗೆ ಒಂಟಿ ಸಲಗ ಎಂಟ್ರಿಕೊಟ್ಟಾಗ, ನಾಯಿಗಳು ಬೊಗಳಲಾರಂಭಿಸಿವೆ. ಇದರಿಂದ ಕೋಪಗೊಂಡ ಆನೆ ಗ್ರಾಮದ ಹಲವೆಡೆ ದಾಂಧಲೆ ನಡೆಸಿದೆ. ಇದೇ ವೇಳೆ, ಮನೆಯ ಬಳಿ ನಿಂತಿದ್ದ ಮೀನಾ ಎಂಬವರಿಗೆ ಸೇರಿದ ಕಾರನ್ನು ಆನೆ ಎತ್ತಿ ಎಸೆದಿದೆ. ಆನೆ ನಡೆಸಿದ ದಾಳಿಯಿಂದ ಕಾರು ನಜ್ಜು ಗುಜ್ಜಾಗಿದೆ.

ಕ್ಯಾಪ್ಟನ್ ಹೆಸರಿನ ಈ ಒಂಟಿ ಸಲಗ ವರ್ಷದ ಹಿಂದೆ ಕರಡಿ ಹಾಗೂ ಕಾಡಾನೆಯೊಂದಿಗೆ ಸೆಣೆಸಾಡಿತ್ತು. ಈಗ ಗ್ರಾಮದೊಳಗೆ ಬಂದು ಆನೆ ಪುಂಡಾಟ ನಡೆಸಿದೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಇಟಿಎಫ್ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!