ಹಾಸನ : ಕೆರೆಗೆ ಕಾರು ಉರುಳಿ ಮಹಿಳೆ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಅದು ಆಕ್ಸಿಡೆಂಟ್ ಅಲ್ಲ ಕೊಲೆ ಅನ್ನೋದು ಪೊಲೀಸರಿಗೆ ದೂರು ಬಂದಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚಂದನಹಳ್ಳಿಯಲ್ಲಿ ನಡೆದಿದೆ.
ಹೌದು .. ವಿವಾಹಿತ ಮಹಿಳೆ ಪ್ರೀತಿ ನಿರಾಕರಿಸಿದ್ದಕ್ಕೆ, ಸಿನಿಮೀಯ ರೀತಿಯಲ್ಲಿ ಕಾರನ್ನು ಕೆರೆಗೆ ತಳ್ಳಿ ಮಹಿಳೆ ಹತ್ಯೆ ಮಾಡಿರೋ ಆರೋಪ ಕೇಳಿಬಂದಿದ್ದು ಬೇಲೂರಿನ ಶ್ವೇತಾ(32) ಕೊಲೆಯಾದ ಮಹಿಳೆಯಾಗಿರುತ್ತಾರೆ.
ಹಲವು ವರ್ಷಗಳಿಂದ ಪರಿಚಿತನಾಗಿದ್ದ ವ್ಯಕ್ತಿ ಜೊತೆ ಶ್ವೇತಾ ಗೆಳೆತನ ಹೊಂದಿದ್ದಳು. ತಾನು ಪತ್ನಿ ಬಿಟ್ಟು ಬರ್ತೀನಿ ನೀನು ನನ್ನೊಟ್ಟಿಗೆ ಬಾ ಎಂದು ರವಿ ಪೀಡಿಸುತ್ತಿದ್ದನಂತೆ, ಶ್ವೇತಾ ಗಂಡನಿಂದ ದೂರವಾಗಿ ತಂದೆ ತಾಯಿ ಜೊತೆ ನೆಲೆಸಿದ್ದರು. ಶ್ವೇತಾ ರವಿ ಒತ್ತಾಯ ನಿರಾಕರಿಸಿದ್ದರಿಂದ ಪ್ರೀತಿ ನಿರಾಕರಿಸಿದ್ದಕ್ಕೆ ಕೆರೆಗೆ ತಳ್ಳಿ ಕೊಲೆ ಮಾಡಿದ ಆರೋಪ ಕೇಳಿಬಂದಿದೆ.
ರವಿ ಬುಧವಾರ ಹಾಸನದಿಂದ ತನ್ನ ಕಾರಿನಲ್ಲಿ ಶ್ವೇತಾ ಕರೆತಂದಿದ್ದನು, ಚಂದನಹಳ್ಳಿ ಕೆರೆಗೆ ಕಾರಿನ ಸಮೇತ ಶ್ವೇತಾ ಬೀಳಿಸಿ, ಕೊಮಾಡಿ ಬಳಿಕ ಆಕಸ್ಮಿಕವಾಗಿ ಕಾರು ಬಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆದರೆ ಶ್ವೇತಾ ಕುಟುಂಬ ಸದಸ್ಯರ ದೂರು ಆಧರಿಸಿ ಕೊಲೆ ಕೇಸ್ ದಾಖಲು ಮಾಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ರವಿಯನ್ನ ವಶಕ್ಕೆ ಪಡೆದಿದ್ದಾರೆ. ಅರೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
