Friday, February 13, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು:‌ ಹಬ್ಬಗಳ ಬಂದೋಬಸ್ತ್‌ ಪ್ರಯುಕ್ತ ನಗರದಲ್ಲಿ ಪೊಲೀಸರ ರೂಟ್‌ ಮಾರ್ಚ್!

ಚಿಕ್ಕಮಗಳೂರು:‌ ಹಬ್ಬಗಳ ಬಂದೋಬಸ್ತ್‌ ಪ್ರಯುಕ್ತ ನಗರದಲ್ಲಿ ಪೊಲೀಸರ ರೂಟ್‌ ಮಾರ್ಚ್!

ಚಿಕ್ಕಮಗಳೂರು: ಗೌರಿ ಗಣೇಶ ಮತ್ತು ಈದ್‌ ಮಿಲಾದ್‌ ಹಬ್ಬಗಳ ಬಂದೋಬಸ್ತ್‌ ಪ್ರಯುಕ್ತ ಮೆರವಣಿಗೆಗಳು ಸಾಗುವ ಪ್ರಮುಖ ಸ್ಥಳ, ಸೂಕ್ಷ್ಮ, ಅತೀ ಸೂಕ್ಷ್ಮ ಸ್ಥಳಗಳು ಹಾಗೂ ಪ್ರದೇಶಗಳಲ್ಲಿ ಕಾಲ್ನಡಿಗೆಯಲ್ಲಿ ಪರಿಶೀಲನೆ ಮಾಡಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಇಂದು ಪೊಲೀಸರು ರೂಟ್‌ ಮಾರ್ಚ್‌ ಆಯೋಜಿಸಿದ್ದರು.

ಹೌದು .. ಚಿಕ್ಕಮಗಳೂರು ನಗರದ ವಿಜಯಪುರ ರಸ್ತೆ, ರತ್ನಗಿರಿ ರಸ್ತೆ, ಬಸವನಹಳ್ಳಿ ರಸ್ತೆ ಮತ್ತು ಹನುಮಂತಪ್ಪ ಸರ್ಕಲ್‌, ಸೇರಿದಂತೆ ಹೆಚ್ಚು ಜನಸಂದಣಿ ಇರುವ ರಸ್ತೆಗಳಲ್ಲಿ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಭದ್ರತಾ ಹಿತದೃಷ್ಟಿಯಿಂದ ಕಾಲ್ನಡಿಗೆಯಲ್ಲಿ ರೂಟ್‌ ಮಾರ್ಚ ನಡೆಸಿದರು.

ಈ ಕಾಲ್ನಡಿಗೆಯಲ್ಲಿ ಎಸ್‌ ಪಿ ವಿಕ್ರಂ ಅಮಟೆ, ಎ ಎಸ್ಪಿ ಜಯಕುಮಾರ್‌, ಡಿವೈಎಸ್‌ ಪಿ ಶೈಲೇಂದ್ರ ಅವರ ನೇತೃತ್ವದಲ್ಲಿ ನಡೆಸಲಾಯಿತು. ಜಿಲ್ಲಾ ಪೊಲೀಸ್‌ ಪಡೆ, ನಗರ ಠಾಣೆಗಳ ಸಿಬ್ಬಂದಿ ಹಾಗೂ ಪೊಲೀಸರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!