ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣದಲ್ಲಿ ಎಸ್.ಐ.ಟಿ ಅಧಿಕಾರಿಗಳು ದೂರುದಾರ ಚಿನ್ನಯ್ಯ ನನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದು. ಈ ನಡುವೆ ಉಜಿರೆಯಲ್ಲಿ ಕೆಲಸ ಮಾಡುತ್ತಿರುವ ಚಿನ್ನಯ್ಯ ಸಹೋದರ ತಾನಾಸಿಯನ್ನು ಉಜಿರೆಯಿಂದ ಎಸ್.ಐ.ಟಿ ಅಧಿಕಾರಿಗಳು ಆ.23 ರಂದು ಬೆಳಗ್ಗೆ 9 ಗಂಟೆಗೆ ವಶಕ್ಕೆ ಪಡೆದು ಬೆಳ್ತಂಗಡಿ ಎಸ್.ಐ.ಟಿ ಕಚೇರಿಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ
ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಮುಸುಕುಧಾರಿಯಾಗಿ ಎಂಟ್ರಿಯಾಗಿದ್ದ ಸಾಕ್ಷಿಧಾರ ಚೆನ್ನಯ್ಯನನ್ನು ಬೆಳ್ತಂಗಡಿ ನ್ಯಾಯಾಲಯ 10 ದಿನ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ..ಸತತ ವಿಚಾರಣೆ ನಡೆಸಿದ್ದ ಎಸ್‌ಐಟಿ ಪೊಲೀಸರು ಇಂದು ಬೆಳಗ್ಗೆ ಚಿನ್ನಯ್ಯನನ್ನು ಬಂಧಿಸಿದ್ದರು.
