Wednesday, August 12, 2026
Homeಕ್ರೈಮ್ಹೊಳೆನರಸೀಪುರ: ಹೇಮಾವತಿ ನದಿ ಎಡದಂಡೆ ನಾಲೆಯಲ್ಲಿ ಕಾರೊಂದು ಪತ್ತೆ: ಓರ್ವ ಪುರುಷ & ಮಹಿಳೆಯ ಶವ...

ಹೊಳೆನರಸೀಪುರ: ಹೇಮಾವತಿ ನದಿ ಎಡದಂಡೆ ನಾಲೆಯಲ್ಲಿ ಕಾರೊಂದು ಪತ್ತೆ: ಓರ್ವ ಪುರುಷ & ಮಹಿಳೆಯ ಶವ ಪತ್ತೆ!

Telegram Group
Join Now

ಹಾಸನ: ಹೊಳೆನರಸೀಪುರದ ಹರಳಹಳ್ಳಿ ಗ್ರಾಮದ ಬಳಿಯ ಹೇಮಾವತಿ ನದಿ ಎಡದಂಡೆ ನಾಲೆಯಲ್ಲಿ ಕಾರೊಂದು ಪತ್ತೆಯಾಗಿದೆ.

ಶನಿವಾರ ರಾತ್ರಿ ನಾಲೆಗೆ ಕಾರು ಬಿದ್ದಿದೆ ಎಂದು ಶಂಕಿಸಲಾಗಿದೆ. ಕಾರನ್ನು ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯರು ಕಾರನ್ನು ಮೇಲೆತ್ತಿದ್ದಾರೆ. ಕಾರು ಪತ್ತೆಯಾದ ಸಮೀಪದ ದೊಡ್ಡಕುಂಚೇವು ಗ್ರಾಮದ ಕೆರೆಯಲ್ಲಿ ಓರ್ವ ಪುರುಷ ಹಾಗೂ ಮಹಿಳೆಯ ಶವಗಳು ಪತ್ತೆಯಾಗಿವೆ. ಕಾರಿನಲ್ಲಿದ್ದ ಇನ್ನಿಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ

ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವಗಳ ಗುರುತು ಇನ್ನೂ ಪತ್ತೆಯಾಗಿಲ್ಲ.

ಕಾರು ಕೊಂತಗೋಡನಹಳ್ಳಿ ಗ್ರಾಮದ ಪ್ರೇಮಕುಮಾರ್ (38) ಎಂಬುವವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಪ್ರೇಮಕುಮಾರ್ ಆ.17ರಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನೂ ಪೊಲೀಸರು ಕರೆ ಮಾಡಿದಾಗ ಪ್ರೇಮಕುಮಾರ್ ಫೋನ್ ಮೊದಲು ರಿಂಗ್ ಆಗಿದೆ, ಬಳಿಕ ಸ್ವಿಚ್ ಆಫ್ ಆಗಿದೆ. 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments