ಚಿಕ್ಕಮಗಳೂರು: ಧರ್ಮಸ್ಥಳದ ವಿರುದ್ಧ ಕುತಂತ್ರಿಗಳಿಂದ ನಡೆಯುತ್ತಿರುವ ಅಪಪ್ರಚಾರದ ನಡುವೆ ನಗರದ ಹನುಮಂತಪ್ಪ ವೃತ್ತದಲ್ಲಿ ಧರ್ಮಸ್ಥಳ ಮಹಾದ್ವಾರ ನಿರ್ಮಾಣಗೊಂಡಿದೆ.
ಈ ಬಾರಿ ಧರ್ಮಸ್ಥಳ ಮಹಾದ್ವಾರದ ಮೂಲಕ ಹಿಂದೂ ಮಹಾಸಭಾ ಗಣಪತಿಯನ್ನು ಪ್ರತಿಷ್ಠಾಪನೆ ಮಾಡುವ ನಿರ್ಧಾರವನ್ನು ಹಿಂದೂ ಮಹಾಸಭಾ ಗಣಪತಿ ಸೇವಾ ಸಮಿತಿ ಕೈಗೊಂಡಿದೆ. ನಾಳೆ ಬಸವನಹಳ್ಳಿಯ ಮುಖ್ಯರಸ್ತೆಯಲ್ಲಿ ಓಂಕಾರೇಶ್ವರ ದೇವಾಲಯದ ಆವರಣದಲ್ಲಿ ಹಿಂದೂ ಮಹಾಸಭಾ ಗಣಪತಿಯನ್ನು ಪ್ರತಿಷ್ಠಾಪನೆ ಕೈಗೊಂಡಿದೆ.
ಧರ್ಮಸ್ಥಳದ ಪರವಾಗಿ ಬೆಂಬಲ ವ್ಯಕ್ತಪಡಿಸಿದ ಹಿಂದೂ ಸಂಘಟನೆಗಳು, ವಿಶ್ವ ಹಿಂದೂ ಪರಿಷತ್ ಬಜರಂಗದಳ ಸೇರಿದಂತೆ ವಿವಿಧ ಸಂಘಟನೆಗಳು ಈ ಕಾರ್ಯಕ್ಕೆ ಮುಂದಾಗಿವೆ. ಧರ್ಮಸ್ಥಳದ ವಿರುದ್ಧ ಷಡ್ಯಂತರ ಹಾಗೂ ಆರೋಪಗಳ ನಡುವೆ ಹನುಮಂತಪ್ಪ ವೃತ್ತದಲ್ಲಿ ನಿರ್ಮಿತವಾಗಿರುವ ಧರ್ಮಸ್ಥಳ ಮಹಾದಾರ ಎಲ್ಲರ ಗಮನ ಸೆಳೆದಿದೆ
