Tuesday, February 10, 2026
Homeಜಿಲ್ಲಾಸುದ್ದಿಹಾಸನ ಜಿಲ್ಲೆಯ 10 ಮಂದಿ ಶಿಕ್ಷಕರಿಗೆ "ಆದರ್ಶ ಶಿಕ್ಷಕʼʼ ಪ್ರಶಸ್ತಿ ಗೌರವ: ಸೆ.7ರಂದು ಬೆಂಗಳೂರಲ್ಲಿ ಪ್ರಶಸ್ತಿ...

ಹಾಸನ ಜಿಲ್ಲೆಯ 10 ಮಂದಿ ಶಿಕ್ಷಕರಿಗೆ “ಆದರ್ಶ ಶಿಕ್ಷಕʼʼ ಪ್ರಶಸ್ತಿ ಗೌರವ: ಸೆ.7ರಂದು ಬೆಂಗಳೂರಲ್ಲಿ ಪ್ರಶಸ್ತಿ ಪ್ರದಾನ!

ಹಾಸನ : ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಬೆಂಗಳೂರು ಹಾಗೂ ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ ನಡೆಸಲಿರುವ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಅಂಗವಾಗಿ 2025ನೇ ಸಾಲಿನ “ರಾಜ್ಯಮಟ್ಟದ ಆದರ್ಶ ಶಿಕ್ಷಕ/ಶಿಕ್ಷಕಿ” ಪ್ರಶಸ್ತಿಗೆ ಹಾಸನ ಜಿಲ್ಲೆಯ 10 ಮಂದಿ ಸಾಧಕ ಶಿಕ್ಷಕರು ಆಯ್ಕೆಯಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಕರ್ನಾಟಕ ವಚನ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಎಂ.ವಿ. ತ್ಯಾಗರಾಜ್ ಅವರು ಪತ್ರಿಕ ಹೇಳಿಕೆ ನೀಡಿರುವ ಅವರು, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸಮರ್ಪಿತ ಬೋಧನೆ-ಕಲಿಕೆಯ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿರುವ ಸಾಧಕ ಶಿಕ್ಷಕರನ್ನು ಗುರುತಿಸಿ ಪ್ರೋತ್ಸಾಹಿಸುವುದು ಈ ಪ್ರಶಸ್ತಿಯ ಉದ್ದೇಶ” ಎಂದು ತಿಳಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 30 ಮಂದಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು, ಅವರಲ್ಲಿ ಹಾಸನ ಜಿಲ್ಲೆಯ 10 ಮಂದಿ ಸ್ಥಾನ ಪಡೆದಿದ್ದಾರೆ.

ಹಾಸನ ಜಿಲ್ಲೆಯ ಪುರಸ್ಕೃತ ಶಿಕ್ಷಕರ ಪಟ್ಟಿ ಇಂತಿದೆ :

  1. ಧರ್ಮೇಗೌಡ, ಡಿ  ಇತಿಹಾಸ ಉಪನ್ಯಾಸಕರು, ಬಾಲಕಿಯರ ಸರ್ಕಾರಿ ಪಿ.ಯು. ಕಾಲೇಜು, ಬೇಲೂರು ತಾಲ್ಲೂಕು
  2. ಪುಟ್ಟಣ್ಣ ನಂದಕುಮಾರ್ ಸಹಶಿಕ್ಷಕರು, ಸ.ಕಿ.ಪ್ರಾ.ಶಾಲೆ, ಮಂಡಿಗನಹಳ್ಳಿ, ಹಾಸನ
  3. ಸೋಮನಾಯಕ್, ಸಹಶಿಕ್ಷಕರು, ಸ.ಕಿ.ಪ್ರಾ.ಶಾಲೆ, ಬ್ಯಾಬ ಕಾಲೋನಿ-1, ಆಲೂರು
  4. ಲೋಕೇಶಗೌಡ ಎಂ.ಟಿ. – ಸಿ.ಆರ್.ಪಿ., ದೇವೇಗೌಡನಗರ, ಹಾಸನ
  5. ಸೌಭಾಗ್ಯ ಕೆ.ಹೆಚ್. – ಸಹಶಿಕ್ಷಕಿ, ಸ.ಹಿ.ಪ್ರಾ.ಶಾಲೆ, ಚಿಕ್ಕಣ್ಣನಕೊಪ್ಪಲು, ಅರಸೀಕೆರೆ ತಾಲ್ಲೂಕು
  6. ಪುಷ್ಪಲತಾ ಕೆ.ಎನ್. – ಸಹಶಿಕ್ಷಕಿ, ಪಿ.ಎಂ.ಶ್ರೀ ಶಾಲೆ, ಕೋಟೆ, ಹೊಳೆನರಸೀಪುರ ತಾಲ್ಲೂಕು
  7. ಪರಮೇಶ (ಕತ್ತಿಮಲ್ಲೇನಹಳ್ಳಿ) – ಸಹಶಿಕ್ಷಕರು, ಸ.ಕಿ.ಪ್ರಾ.ಶಾಲೆ, ಮರಡಿ, ಅರಕಲಗೂಡು ತಾಲ್ಲೂಕು
  8. ಹರೀಶ ಕೆ.ಎಂ. – ಸಹಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಚನ್ನಪಟ್ಟಣ, ಹಾಸನ
  9. ಅನ್ನಪೂರ್ಣ ಸಿ.ಆ‌ರ್. ಸಹಶಿಕ್ಷಕಿ, ಸ.ಕಿ.ಪ್ರಾ.ಶಾಲೆ, ದೇವರಾಜಪುರ, ಆಲೂರು ತಾಲ್ಲೂಕು
  10. ಮಂಜುನಾಥ್ (ಗುಡುಗನಹಳ್ಳಿ) ಸಹಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಮರ್ಕುಲಿ, ಹಾಸನ ತಾಲ್ಲೂಕು

ಈ ಎಲ್ಲ ಶಿಕ್ಷಕರನ್ನು ರಾಜ್ಯಮಟ್ಟದ “ಆದರ್ಶ ಶಿಕ್ಷಕ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ಸೆ. 7.ರಂದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಜರುಗಲಿದೆ.

ಕಾರ್ಯಕ್ರಮವು ಬೆಂಗಳೂರಿನ ಚಿತ್ರಕಲ ಪರಿಷತ್ ಸಭಾಂಗಣದಲ್ಲಿ ಸೆಪ್ಟೆಂಬರ್ 7ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ನೆರವೇರಿಸಲಿದ್ದು ಅಧ್ಯಕ್ಷತೆಯನ್ನ ಡಾ. ಎಸ್.ಜಿ. ಸುಶೀಲಮ್ಮ ವಯ್ಸಲಿದ್ದು ಪ್ರಾಸ್ತವಿಕ ನುಡಿಯನ್ನ ಎಂವಿ ತ್ಯಾಗರಾಜ್ ನುಡಿಯಲಿದ್ದಾರೆ ಆಶಯ ನುಡಿಯನ್ನ ರವಿ ನಾಕಲಗೂಡು ಅವರು ನುಡಿಯಲಿದ್ದು ಹಲವು ಗಣ್ಯರು ಭಾಗವಹಿಸಲಿದ್ದಾರೆ

ಕರುನಾಡ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು

ವರದಿ: ಶಾಲಿನಿ ಪಿ.ಗೌಡ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!