Sunday, August 9, 2026
Homeಜಿಲ್ಲಾಸುದ್ದಿಮೂಡಿಗೆರೆ: ಸ್ಥಳೀಯರ ಜತೆ ಸಂವಾದ ನಡೆಸಿ, ಗ್ರಾಮಸ್ಥರ ಅವಹಾಲುಗಳನ್ನು ಆಲಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ

ಮೂಡಿಗೆರೆ: ಸ್ಥಳೀಯರ ಜತೆ ಸಂವಾದ ನಡೆಸಿ, ಗ್ರಾಮಸ್ಥರ ಅವಹಾಲುಗಳನ್ನು ಆಲಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ

Telegram Group
Join Now

ಮೂಡಿಗೆರೆ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಭೇಟಿ ನೀಡಿ, ಹಸಿರು ಫೌಂಡೇಷನ್ ಸಂಸ್ಥೆಯ ನೇತೃತ್ವದಲ್ಲಿ ಪಂಚಾಯಿತಿ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಪ್ರೇರಣೆ ನೀಡಿದರು.

ಹೌದು .. ಸಂಸದರು ಸ್ಥಳೀಯರೊಂದಿಗೆ ಸಂವಾದ ನಡೆಸಿ, ಗ್ರಾಮಸ್ಥರ ಅವಹಾಲುಗಳನ್ನು ಆಲಿಸಿದರು. ಹಸಿರು ಫೌಂಡೇಷನ್ ಸಂಸ್ಥೆಗೆ ನಬಾರ್ಡ್ ಮೂಲಕ ಅನುದಾನ ದೊರಕಿಸಿಕೊಡಬೇಕೆಂದು ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಊರುಬಗೆ ಪಂಚಾಯಿತಿ ಅಧ್ಯಕ್ಷೆ ಪುಷ್ಪ, ಮಾಜಿ ಅಧ್ಯಕ್ಷರು ಸಂತೋಷ್ ಕುಂಬರಡಿ, ನಾಚಿಕೆತ್ ಬೈರಪುರ, ಕೆ.ಪಿ. ಭಾರತಿ, ಪಂಚಾಯಿತಿ ಪಿಡಿಒ ಇಂತೇಶ್, ಮುಖಂಡ ದೀಪಕ್ ದೊಡ್ಡಯ್ಯ, ಬಿಜೆಪಿ ತಾಲೂಕು ಅಧ್ಯಕ್ಷ ಗಜೇಂದ್ರ ತರುವೆ, ಬಿಜೆಪಿ ಗೋಣಿಬಿಡು ಹೋಬಳಿ ಅಧ್ಯಕ್ಷ ಭರತ್ ವಾಲೇಕರಟಿ, ಸಂತೋಷ್ ಮೇಕನಗದ್ದೆ, ಜೆ.ಎಸ್. ರಘು, ರವೀಂದ್ರ ಬಾಳೆಗದ್ದೆ, ವಿನೋದ್ ಕಣಚೂರು, ಬಿಎಸ್‌ಎನ್‌ಎಲ್ ನಾಮನಿರ್ದೇಶಿತ ಸದಸ್ಯ ಚೆಮಿನನ್ ಬೆಳಗೊಡು, ರಘು ಪಟ್ಟದುರು, ಪ್ರಶಾಂತ್ ಬಿಳುಗುಳ, ಪ್ರೇಮ್ ಸತ್ತಿಗನಹಳ್ಳಿ, ಸಂಜೀವ್ ಪ್ರಸಾದ್, ಸುನಿಲ್ ನೀಡಗುಡು, ಪ್ರಕಾಶ್ ಕಿರುಗುಂದ, ಸಾಗರ್, ಸಂದೇಶ್, ಲಕ್ಷಣಗೌಡ ಸತ್ತಿಗನಹಳ್ಳಿ, ನಿಂಗಪ್ಪ ಹೊಸಕೆರೆ, ಹಸಿರು ಫೌಂಡೇಷನ್ ಫೀಲ್ಡ್ ಕೋಆರ್ಡಿನೇಟರ್ ಅದೀಪ್ ಊರುಬಗೆ, ನಿರ್ದೇಶಕ ಪ್ರದೀಪ್ ಊರುಬಗೆ ಸೇರಿದಂತೆ ಅನೇಕ ಗ್ರಾಮಸ್ಥರು ಇದ್ದರು. 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments