ಹಾಸನ: ಜಿಲ್ಲೆಯ ಹೆಮ್ಮೆಯ ವಿಷಯ ಹಾಸನ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆ(ರಿ) ಸಂಸ್ಥೆಯ ಸಹಾಯಕ ಕಾರ್ಯದರ್ಶಿಯಾದ ಹಾಗೂ ಅಥೆಟಿಕ್ಸ್ ತರಬೇತಿದಾರರಾದ ಪ್ರಸನ್ನ ಕುಮಾರ್ ಎಸ್.ಎಲ್ . ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ನಮ್ಮ ಹಾಸನದಿಂದ ಏಕೈಕ ವ್ಯಕ್ತಿ ತೀರ್ಪುಗಾರರಾಗಿ ಆಯ್ಕೆಯಾಗಿರುತ್ತಾರೆ
ಜಗತ್ತಿನಲ್ಲೇ ಒಲಂಪಿಕ್ ಬಿಟ್ಟರೆ ಅತ್ಯಂತ ಎರಡನೇ ದೊಡ್ಡದಾದ ಅಂತಹ ಅಂತರಾಷ್ಟ್ರೀಯ ಕ್ರೀಡಾಕೂಟ , ನವ ದೆಹಲಿಯಲ್ಲಿ 25 ಸೆಪ್ಟೆಂಬರ್ ರಿಂದ 5 ಅಕ್ಟೋಬರ್ 2025 . ವಿಶ್ವ ಪ್ಯಾರ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ (world Para Athletic Championships) ನಡೆಯಲಿದೆ.
ಈ ವಿಶ್ವಮಟ್ಟದ ಕ್ರೀಡಾಕೂಟವನ್ನು ಪ್ಯಾರಾ ಕಮಿಟ್ ಆಫ್ ಇಂಡಿಯಾ . ನಡೆಸಲಿದ್ದು ಈ ಕ್ರೀಡಾಕೂಟಕ್ಕೆ 110 ದೇಶಗಳು ಹಾಗೂ 1700 ಅಂತರಾಷ್ಟ್ರೀಯ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಈ ಕ್ರೀಡಾಕೂಟಕ್ಕೆ ನಮ್ಮ ಸಂಸ್ಥೆಯ ಪ್ರಸನ್ನ ಕುಮಾರ್ S.L ಅವರು ಅಂತರಾಷ್ಟ್ರೀಯ ತೀರ್ಪುಗಾರರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಈ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.
ಮುಂದಿನ ದಿನಗಳಲ್ಲಿ ಇವರು ಒಲಂಪಿಕ್ ನಲ್ಲಿ ತೀರ್ಪುಗಾರರಾಗಿ ಆಯ್ಕೆಯಾಗಲೆಂದು ನಮ್ಮ ಹಾಸನ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಸಂಸ್ಥೆಯ, ಅಧ್ಯಕ್ಷರು ಎಲ್ಲಾ ಸದಸ್ಯರುಗಳು ಹಾಗೂ ಯುವ ಸಬಲೀಕರಣ ಕ್ರೀಡಾ ಇಲಾಖೆ ಹಾಸನ ಮತ್ತು ಜಿಲ್ಲಾ ಕ್ರೀಡಾಂಗಣದ ಎಲ್ಲ ತರಬೇತಿದಾರರು ಮತ್ತು ಎಲ್ಲ ಕ್ರೀಡಾಪಟುಗಳ ಪರವಾಗಿ ಹಾಗೂ ಹಾಸನ ಜಿಲ್ಲೆಯ ಎಲ್ಲಾ ಕ್ರೀಡಾ ಪ್ರೇಮಿಗಳು. ಈ ಎಲ್ಲರ ಪರವಾಗಿ ಶುಭ ಹಾರೈಸುತಿದ್ದೇವೆ.
