Tuesday, February 10, 2026
Homeಜಿಲ್ಲಾಸುದ್ದಿಸಕಲೇಶಪುರ: 70 ವರ್ಷದ ಮಹಿಳೆ ನಾಪತ್ತೆ: ಪತ್ತೆಹಚ್ಚಲು ಶೋಧ ಕಾರ್ಯ!

ಸಕಲೇಶಪುರ: 70 ವರ್ಷದ ಮಹಿಳೆ ನಾಪತ್ತೆ: ಪತ್ತೆಹಚ್ಚಲು ಶೋಧ ಕಾರ್ಯ!

ಸಕಲೇಶಪುರ: ತಾಲೂಕಿನ ನಿವಾಸಿ ರಂಗಮ್ಮ (70 ವರ್ಷ) ಕಾಣೆಯಾಗಿರುವ ಘಟನೆ ವರದಿಯಾಗಿದೆ.

ಮನೆಯಲ್ಲೇ ವಾಸಿಸುತ್ತಿದ್ದ ರಂಗಮ್ಮ ಅವರು ಆ 15 ರ.ದು ಬೆಳಿಗ್ಗೆ 9 ಗಂಟೆಗೆ ತಿಂಡಿ ಮಾಡಿ ಮನೆಯಿಂದ ಹೊರಟಿದ್ದರು. ಆದರೆ ಸಂಜೆ 6 ಗಂಟೆಯಾದರೂ ವಾಪಾಸ್ ಮನೆಗೆ ಬಾರದ ಕಾರಣ ಕುಟುಂಬಸ್ಥರು ಚಿಂತೆಗೊಂಡಿದ್ದಾರೆ.

ಮಗ ಪಿರಿಯಾದಿ ರಾಮ ಅವರ ಪ್ರಕಾರ, ತಾಯಿ ಕಾಣೆಯಾದ ನಂತರ ಸಂಬಂಧಿಕರು, ಪರಿಚಯಸ್ಥರ ಮನೆಗಳಿಗೆ ತೆರಳಿ ಹುಡುಕಾಟ ನಡೆಸಿದರೂ ಇದುವರೆಗೂ ಯಾವುದೇ ಸುಳಿವು ಸಿಗಲಿಲ್ಲ. ಅಂತಿಮವಾಗಿ ಠಾಣೆಗೆ ಹಾಜರಾಗಿ ದೂರು ಸಲ್ಲಿಸಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಾಣೆಯಾದ ರಂಗಮ್ಮ ಅವರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಯಾರಿಗಾದರೂ ಇವರು ಕಂಡುಬಂದಲ್ಲಿ ಮಂಜುನಾಥ 9148345112 ಮತ್ತು ರಾಮ 7022098127 ಈ ಈ ನಂಬರಿಗೆ ಕಾಲ್ ಮಾಡಿ ತಿಳಿಸುವಂತೆ ಕೋರಲಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!