Saturday, September 26, 2026
Homeಜಿಲ್ಲಾಸುದ್ದಿಮೂಡಿಗೆರೆ: ಗಣಪತಿ ಮೆರವಣಿಗೆ ಸೌಹರ್ದತೆ ಮೆರೆದ ಸಮಾಜ ಸೇವಕ ಹಸೈನಾರ್ ಬಳಗ

ಮೂಡಿಗೆರೆ: ಗಣಪತಿ ಮೆರವಣಿಗೆ ಸೌಹರ್ದತೆ ಮೆರೆದ ಸಮಾಜ ಸೇವಕ ಹಸೈನಾರ್ ಬಳಗ

Telegram Group
Join Now

ಮೂಡಿಗೆರೆ: ಬಿಳಗುಳ ಗ್ರಾಮದ ಗಣೇಷ ವಿಸರ್ಜನೆ ಕಾರ್ಯವನ್ನು ನಿನ್ನೆ ತಡರಾತ್ರಿ ವಿಸರ್ಜಿಸಲಾಯಿತು.

ಈ ವೇಳೆ ಮೂಡಿಗೆರೆ ಸಮಾಜ ಸೇವಕರಾದ ಹಸೈನಾರ್ ಮತ್ತು ತಂಡದಿಂದ ಸಿಹಿ ಹಂಚಿ ದಣಿವಾರಿಸಿ ಸೌಹಾರ್ದತೆ ಮೆರೆದರು

ಕೆ ಎಂ ರಸ್ತೆ ಮಾರ್ಗವಾಗಿ ಸಾಗಿ ಬಂದ ಗಣೇಶೋತ್ಸವ ಮೆರವಣಿಗೆ ವೇಳೆ ಸಾವಿರಾರು ಭಕ್ತರಿಗೆ ಸಿಹಿ ಹಂಚಿ ಸೌಹಾರ್ದತೆ ಮೆರೆಯಲಾಯಿತು.

ಬಿಸಿಲಿನಲ್ಲಿ ನಡೆದು-ನಡೆದು ದಣಿದ ಭಕ್ತರಿಗೆ ರಸ್ತೆ ಮಧ್ಯೆ ಮುಸ್ಲಿಂ ಬಾಂಧವರು ಜ್ಯೂಸ್ ಹಾಗೂ ನೀರು.ಹಣ್ಣು ನೀಡಿ ಸೌಹಾರ್ದತೆ ಮೆರೆದಿದ್ದಾರೆ.

ಮೂಡಿಗೆರೆ ತಾಲೂಕಿನ ಬಿಳುಗುಳ ಸಮೀಪದ ನೂರುಲ್ ಹುದಾ ಜುಮ್ಮ ಮಸೀದಿಯ, ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮುಸ್ಲಿಂ ಬಾಂಧವರು ಗಣಪನ ಭಕ್ತರಿಗೆ ಹಣ್ಣು, ಪಾನೀಯ, ಮಜ್ಜಿಗೆಗಳನ್ನು ನೀಡಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸಿದ್ದಾರೆ.

ಇವರ ಕಾರ್ಯಕ್ಕೆ ಭಕ್ತರು ಹಾಗೂ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!