Friday, June 26, 2026
Homebig breakingಕೆನ್ನೆಯ ಗಾಯಕ್ಕೆ ಫೆವಿಕ್ವಿಕ್‌ ಟ್ರೀಟ್ಮೆಂಟ್‌ - ಹಾವೇರಿಯಲ್ಲೊಬ್ಬರು ಮಾಡರ್ನ್‌ ನರ್ಸ್..!‌

ಕೆನ್ನೆಯ ಗಾಯಕ್ಕೆ ಫೆವಿಕ್ವಿಕ್‌ ಟ್ರೀಟ್ಮೆಂಟ್‌ – ಹಾವೇರಿಯಲ್ಲೊಬ್ಬರು ಮಾಡರ್ನ್‌ ನರ್ಸ್..!‌

ಹಾವೇರಿ : ನಮ್ಮ ದೇಹಕ್ಕೇನಾದ್ರು ಗಾಯವಾದ್ರೆ ಮುಲಾಮು ಹಚ್ಚಿ ಬ್ಯಾಂಡೇಜ್‌ ಹಾಕಲಾಗುತ್ತೆ. ದೊಡ್ಡ ಪ್ರಮಾಣದ ಗಾಯವಾದ್ರೆ ಹೊಲಿಗೆ ಹಾಕಲಾಗುತ್ತದೆ. ಆದರೆ ಇಲ್ಲೊಬ್ಬ ನರ್ಸ್‌ ಗಾಯಕ್ಕೆ ಫೆವಿ ಕ್ವಿಕ್‌ ಹಾಕಿ ಚಿಕಿತ್ಸೆ ಕೊಟ್ಟಿರುವ ಪ್ರಕರಣವೊಂದು ನಡೆದಿದೆ.
ಈ ಪ್ರಕರಣ ಆಗಿರೋದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ. ಜನವರಿ 14ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 7 ವರ್ಷದ ಬಾಲಕ ಗುರುಕಿಶನ್ ಅಣ್ಣಪ್ಪ ಹೊಸಮನಿ ಎಂಬಾತನಿಗೆ ಆಟ ಆಡುವಾಗ ಕೆನ್ನೆಗೆ ಗಾಯವಾಗಿತ್ತು. ಹೊಲಿಗೆ ಹಾಕಿ ಚಿಕಿತ್ಸೆ ಕೊಡಬೇಕಾದ ರೀತಿಯ ಗಾಯವದು, ತಿಔರ ರಕ್ತ ಸೋರಿಕೆಯಾಗುತ್ತಿದ್ದುದರಿಂದ ಗುರುಕಿಶನ್‌ನನ್ನು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ವಿದ್ಯಾರ್ಥಿಗೆ ಗಾಯಕ್ಕೆ ಹೊಲಿಗೆ ಹಾಕೋದು ಬಿಟ್ಟು ಫೆವಿಕ್ವಿಕ್ ಗಮ್ ಅಂಟಿಸಿ ನರ್ಸ್‌ ಜ್ಯೋತಿ ಎಂಬವರು ಚಿಕಿತ್ಸೆ ನೀಡಿದ್ದರು.
ಇತ್ತ ಬಾಲಕನಿಗೆ ಫೆವಿಕ್ವಿಕ್ ಯಾಕೆ ಹಾಕಿದ್ದೀರಿ ಅಂತ ಪೋಷಕರು ಕೇಳಿದ್ದಾರೆ. ಸ್ಟಿಚ್ ಹಾಕಿದರೆ ಬಾಲಕನ ಕೆನ್ನೆ ಮೇಲೆ ಕಲೆ ಆಗುತ್ತೆ. ಹೀಗಾಗಿ ಚರ್ಮದ ಮೇಲೆ ಫೆವಿಕ್ವಿಕ್ ಹಾಕಿದ್ದೇನೆ. ನನಗೆ ತಿಳಿದ ಮಟ್ಟಿಗೆ ನಾನು ಚಿಕಿತ್ಸೆ ಮಾಡಿದ್ದೇನೆ ಎಂದಿದ್ದಾರೆ.
ಫೆವಿಕ್ವಿಕ್ ಹಚ್ಚಬೇಡಿ, ಬೇರೆ ಕಡೆ ಚಿಕಿತ್ಸೆ ಕೊಡಿಸುತ್ತೇವೆ ಅಂದಿದ್ದರೆ ಕಳುಹಿಸಿಕೊಡುತ್ತಿದ್ದೆ ಅಂತಾನೂ ಬೇಜವಾಬ್ದಾರಿಯ ಉತ್ತರ ಕೊಟ್ಟಿದ್ದಾರೆ. ಇದನ್ನು ಪೋಷಕರು ಮೊಬೈಲ್‌ನಲ್ಲಿ ವೀಡಿಯೋ ಮಾಡಿಕೊಂಡಿದ್ದು, ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ದೂರು ನೀಡಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿಗೂ ಈ ಸಂಬಂಧ ದೂರು ನೀಡಲಾಗಿದ್ದು, ಬಾಲಕ ಜೀವದ ಜೊತೆ ಚೆಲ್ಲಾಟವಾಡಿದ ನರ್ಸ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಮತ್ತೊಂದೆಡೆ ವೈದ್ಯೆ ಕೊಟ್ಟ ಟ್ರೀಟ್‌ಮೆಂಟ್‌ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments