ಬಾಲಿವುಡ್ ನಿರ್ದೇಶಕ ಮತ್ತು OTT ಚಲನಚಿತ್ರ ನಿರ್ಮಾಪಕ ರಾಜ್ ನಿಡಿಮೋರು ಜೊತೆ ನಟಿ ಸಮಂತಾ ರುತ್ ಪ್ರಭು ಮದುವೆ ಮಾಡಿಕೊಂಡಿದ್ದಾರೆ. ಸರಳವಾಗಿ ವಿವಾಹವಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ಮದುವೆಯ ಖುಷಿಯ ಕ್ಷಣಗಳನ್ನು ಪ್ರೇಕ್ಷಕರೊಂದಿಗೆ ಹಂಚಿಕೊಂಡಿದೆ. ಈ ಖುಷಿಯ ಸುದ್ದಿಯ ಬೆನ್ನಲ್ಲೇ ಸಮಂತಾ ವರಿಸಿರುವ ಗಂಡು ಯಾರು? ಇವರ ಹಿನ್ನೆ ಏನು? ಎಂಬ ವಿಚಾರ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಹಾಗಾದರೆ, ಈ ರಾಜ್ ನಿಡಿಮೋರು ಯಾರು? ಇವರು ಚಿತ್ರರಂಗದಲ್ಲಿ ಮಾಡಿರುವ ಸಾಧನೆಗಳೇನು ಎಂಬುದರ ವಿವರ ಇಲ್ಲಿದೆ
ತಿರುಪತಿಯಿಂದ ಬಾಲಿವುಡ್‌ವರೆಗೆ
ತಿರುಪತಿಯ ಒಂದು ಸಾಮಾನ್ಯ ತೆಲುಗು ಕುಟುಂಬದಲ್ಲಿ ಜನಿಸಿದ ರಾಜ್ ನಿಡಿಮೋರು ತನ್ನ ಕೈಯಲ್ಲಿ ಪುಸ್ತಕಕ್ಕಿಂತ ಕ್ಯಾಮೆರಾ ಹಿಡಿಯುವ ಕನಸು ಕಂಡಿದ್ದೆ ಹೆಚ್ಚು. ಸಾಮಾನ್ಯ ಹಿನ್ನೆಲ್ಲೆಯಿಂದ ಬಂದ ಬಾಲಕ ಇಂದು ಭಾರತೀಯ OTT ಜಗತ್ತಿನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಇಂಜಿನಿಯರಿಂಗ್ ಪದವಿ ಪಡೆದಿರುವ ರಾಜ್, ಅಮೆರಿಕಾಗೆ ತೆರಳಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. ಉತ್ತಮ ಸಂಬಳ, ಆರಾಮದಾಯಕ ಜೀವನವಿದ್ದರೂ ಸಿನಿಮಾ ತುಡಿತ ರಾಜ್ ಅವರನ್ನು ಮತ್ತೆ ಭಾರತಕ್ಕೆ ಮರಳುವಂತೆ ಮಾಡಿದೆ.
ರಾಜ್ ಮತ್ತು ಡಿಕೆ ಜಂಟಿ ಪಯಣ
ಚಿತ್ರರಂಗದಲ್ಲಿ ರಾಜ್ ಹೆಸರು ಕೇಳ್ತಾ ಇದ್ದ ಹಾಗೆ ನೆನೆಪಿಗೆ ಬರುವ ಮತ್ತೊಂದು ಹೆಸರು ಅಂದರೆ ಅದು ಕೃಷ್ಣ ಡಿಕೆ. ಅಮೆರಿಕಾ ಕೆಲಸ ತೊರೆದು ಭಾರತಕ್ಕೆ ಬಂದ ರಾಜ್ಗೆ ಜೊತೆಯಾಗಿದ್ದು, ಕಾಲೇಜು ಗೆಳೆಯ ಕೃಷ್ಣ DK. ರಾಜ್ ನಿಡಿಮೋರು ಮತ್ತು ಡಿಕೆ 2003 ರಿಂದಲೂ ತಮ್ಮ ಜಂಟಿ ನಿರ್ದೇಶನದಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.
ಇವರಿಬ್ಬರು ಅಮೆರಿಕಾದಲ್ಲಿ ಸಿನಿ ಪಯಣ ಆರಂಭಿಸಿದರು. ಮೊದಲ ಸಿನಿಮಾ Flavors (2003) ಅಮೆರಿಕಾದ ಪ್ರಶಂಸೆಗೆ ಪಾತ್ರವಾಯಿತು. ನಂತರ ಹಿಂದಿಯಲ್ಲಿ ‘99’, ‘ಶೋರ್ ಇನ್ ದಿ ಸಿಟಿ’, ‘ಗೋ ಗೋವಾ ಗಾನ್’ ‘ಹ್ಯಾಪಿ ಎಂಡಿಂಗ್’, ‘ಎ ಜೆಂಟಲ್ಮೆನ್’ ಸಿನಿಮಾಗಳನ್ನು ನಿರ್ದೇಶನ ಮಾಡಿದರು. ಈ ಸಿನಿಮಾಗಳು ತಮ್ಮದೇ ಆದ ಶೈಲಿಯಿಂದ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿದವು. ಬಳಿಕ ಸ್ತ್ರೀ (Stree) ಸಿನಿಮಾ ಮೂಲಕ ಹಾರರ್-ಕಾಮೆಡಿ ಪ್ರಪಂಚವನ್ನೇ ಬದಲಿಸಿದರು. ಇವರಿಬ್ಬೆಉ ಕೆಲವು ಚಿತ್ರಗಳನ್ನು ಸಹ ನಿರ್ಮಾಣ ಮಾಡಿದ್ದಾರೆ.
ಬದುಕು ಬದಲಿಸಿದ ‘ದಿ ಫ್ಯಾಮಿಲಿ ಮ್ಯಾನ್’
ತದನಂತರ ಬಂದ ಒಂದೇ ಒಂದು ವೆಬ್ ಸರಣಿ ಇವರಿಬ್ಬರ ಬದುಕನ್ನೆ ಬದಲಿಸಿದೆ. ಆ ಸರಣೆಯೇ ಭಾರತದ ಒಟಿಟಿಯಲ್ಲಿ ಇತಿಹಾಸ ಸೃಷ್ಟಿಸಿದ ‘ದಿ ಫ್ಯಾಮಿಲಿ ಮ್ಯಾನ್’ . ಈ ಸರಣಿಯಲ್ಲಿ ಮನೋಜ್ ಬಾಜ್ಪಾಯಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡರು. ಮೊದಲ ಸರಣಿ 2019ರಲ್ಲಿ ಪ್ರಸಾರ ಕಂಡಿತು. ಇದನ್ನು ನಿರ್ದೇಶನ ಮಾಡಿದ್ದು ಇದೇ ರಾಜ್ ಹಾಗೂ ಡಿಕೆ. 2021ರಲ್ಲಿ ಎರಡನೇ ಸೀಸನ್ ಪ್ರಸಾರ ಕಂಡಿತು. ಇದರಲ್ಲಿ ಮನೋಜ್ ಜೊತೆಗೆ ವಿಲನ್ ಪಾತ್ರದಲ್ಲಿ ರಗಡ್ ಲುಕ್‌ನಲ್ಲಿ ನಟಿ ಸಮಂತಾ ಕಾಣಿಸಿಕೊಂಡಿದ್ದರು. ಇಲ್ಲಿಂದಲೇ ಇವರಿಬ್ಬರ ನಡುವೆ ಗೆಳೆತನ ಪ್ರೀತಿಯಾಗಿ ಬದಲಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ. ರಾಜ್ ಮತ್ತು ಸಮಂತಾ ಅವರು ‘ಸಿಟಾಡೆಲ್: ಹನಿ ಬನಿ’ ಸರಣಿಯಲ್ಲಿ ಸಹ ಕೆಲಸ ಮಾಡಿದ್ದರೂ, ಈ ಸರಣಿಗೆ ತೀವ್ರ ಯಶಸ್ಸು ಸಿಗಲಿಲ್ಲ. ಆದರೆ ರಾಜ್ ಮತ್ತು DK ಜೋಡಿ ನಿರ್ಮಿಸಿದ ‘ಫರ್ಜಿ’ ಸರಣಿ ಯಶಸ್ಸು ಕಂಡಿತ್ತು
