Friday, September 25, 2026
Homeಕ್ರೈಮ್ನಾನು ಎ1 ಆರೋಪಿನಾ ಎ2 ಆರೋಪಿನಾ? ; ಜೈಲು ಸಿಬ್ಬಂದಿ ಬಳಿ ಮಾಹಿತಿ ಕಲೆ ಹಾಕಿದ...

ನಾನು ಎ1 ಆರೋಪಿನಾ ಎ2 ಆರೋಪಿನಾ? ; ಜೈಲು ಸಿಬ್ಬಂದಿ ಬಳಿ ಮಾಹಿತಿ ಕಲೆ ಹಾಕಿದ ಡಿ ಬಾಸ್

Telegram Group
Join Now

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ ಅಲ್ಲಿ ಹೊರ ಜಗತ್ತಿನ ಸಂಪರ್ಕ ಇಲ್ಲದಂತಾಗಿದೆ. ಅಲ್ಲಿ ವಿಶೇಷ ಭದ್ರತಾ ಸೆಲ್ ನಲ್ಲಿ ಇರಿಸಲಾಗಿದ್ದು ಸೆಲ್ ನಲ್ಲಿ ಟಿವಿ ಇಲ್ಲದೇ ಇರೋದು ದರ್ಶನ್ ರನ್ನು ಕಂಗೆಡಿಸಿದೆ. ಹಾಗಾಗಿ ಊಟ ನೀಡಲು ಬರುವ ಜೈಲು ಸಿಬ್ಬಂದಿ ಬಳಿ ನಟ ದರ್ಶನ್ ಹೊರ ಜಗತ್ತಿನ ಆಗುಹೋಗುಗಳ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಇಂದು ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟ್ ಗೆ 3,991 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದು, ಚಾರ್ಜ್ ಶೀಟ್ ನಲ್ಲಿರುವ ಸಾಕ್ಷಿಗಳ ಬಗ್ಗೆ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ದಂಗಾಗಿದ್ದಾರೆ ಎನ್ನಲಾಗಿದೆ.ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಜೈಲು ಸಿಬ್ಬಂದಿ ಊಟ ಕೊಡಲು ಹೋದಾಗ ಚಾರ್ಜ್ ಶೀಟ್ ಬಗ್ಗೆ ಕೇಳಿದ್ದು, ಚಾರ್ಜ್ ಶೀಟ್ ಪುಟಗಳ ಬಗ್ಗೆ ಕೇಳಿಯೇ ಶಾಖ್ ಆಗಿದ್ದಾರೆ. ಬಳಿಕ ಚಾರ್ಜ್ ಶೀಟ್ ನಲ್ಲಿ ಎ1 ಇರೋದಾ? ಎ2 ಇರೋದಾ ? ಅಂತ ಕೇಳಿದ್ದಾರೆ. ಬಳಿಕ ಸಾಕ್ಷಿಗಳ ಬಗ್ಗೆ ಕೇಳಿ ದಂಗಾಗಿದ್ದಾರೆ ಎನ್ನಲಾಗಿದೆ.

ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟ್ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 3991 ಪುಟಗಳ ಸುದೀರ್ಘವಾದ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ನಲ್ಲಿ ನಟ ದರ್ಶನ್ ರೇಣುಕಾಸ್ವಾಮಿಯನ್ನು ಅಪಹರಣ ಮಾಡಿಸಿದ್ದು, ಹಲ್ಲೆ ಮಾಡಿದ್ದು, ಪಟ್ಟಣಗೆರೆ ಶೆಡ್ ನಲ್ಲಿ ನಟ ದರ್ಶನ್ ಇರೋದು ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಜೊತೆಗೆ ಕೊಲೆಗೂ ಮುನ್ನ ಸ್ಟೋನಿ ಬ್ರೂಕ್ಸ್ ಪಬ್ ನಲ್ಲಿ ಸಭೆ ಮಾಡುವ ರೀತಿಯಲ್ಲಿ ಪಾರ್ಟಿ ಮಾಡಿದ್ದಾರೆ ಎಂದು ಉಲ್ಲೆಖಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!