ಮೂಡಿಗೆರೆ:ತಾಲೂಕಿನ ಬಣಕಲ್ ಪೊಲೀಸ್ ಅಧಿಕಾರಿಗಳು ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ 5 ಮಂದಿ ಬಾಂಗ್ಲಾ ಪ್ರಜೆಗಳನ್ನು ಗೋಣಿಬೀಡು ಸಮೀಪದ ಜನ್ನಾಪುರದಲ್ಲಿ ಬಂಧಿಸಿ ಘಟನೆ ಇಂದು ನಡೆದಿದೆ
ಹೌದು ಬಾಂಗ್ಲಾದೇಶದ ರಾಜಶಾಯಿ ಜಿಲ್ಲೆಯ ನಿವಾಸಿಗಳಾದ ಜಹಾಂಗೀರ್, ಫೈಜುದ್ದಿನ್, ನುಮಾನ್ ಬಶೀರ್,ಮಹಮ್ಮದ್ ಹುಮೈನ್, ಮಹಮ್ಮದ್ ಹಸೀಬುಲ್, ಎಂಬುವರನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಬಣಕಲ್ ಸಮೀಪ ಕಟ್ಟಡ ನಿರ್ಮಾಣ ಕೆಲಸ ಮಾಡಿಕೊಂಡಿದ್ದ ಇವರುಗಳು ಜನ್ನಾಪುರದಲ್ಲಿ ವಾಸಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ದಾಖಲಾತಿ ಪರಿಶೀಲಿಸಿದ ವೇಳೆ 5 ಮಂದಿ ಕಾರ್ಮಿಕರು ಅಕ್ರಮವಾಗಿ ವಾಸವಿದ್ದ ಬಾಂಗ್ಲಾದೇಶದ ನಿವಾಸಿಗಳೆಂದು ಬೆಳಕಿಗೆ ಬಂದಿದೆ.
ಬಾಂಗ್ಲಾ ಪ್ರಜೆಗಳನ್ನು ಠಾಣೆಗೆ ಕರೆತಂದು ಕುಲಂಕುಷವಾಗಿ ಪರಿಶೀಲನೆ ಮಾಡಿ ಅವರ ಸೂಕ್ತ ದಾಖಲಾತಿಗಳನ್ನು ಪರಿಶೀಲಿಸಿದಾಗ ಅವರು ಬಾಂಗ್ಲಾದೇಶ ವಾಸಿಗಳೆಂದು ತಿಳಿದುಬಂದಿರುತ್ತದೆ. ಇಲ್ಲಿಗೆ ಕೂಲಿ ಕೆಲಸವನ್ನು ಮಾಡಲು ಬಂದಿದ್ದರು. ಬಾಂಗ್ಲಾ ಪ್ರಜೆಗಳು ಅಕ್ರಮವಾಗಿ ಭಾರತಕ್ಕೆ ನುಸುಳಿದ್ದಾರೆ ಎಂದು ಠಾಣಾಧಿಕಾರಿ ದಿಲೀಪ್ ಕುಮಾರ್ ತಿಳಿಸಿದ್ದಾರೆ.
