Sunday, July 26, 2026
Homeಜಿಲ್ಲಾಸುದ್ದಿಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮನವರಿಗೆ ಜೆಡಿಎಸ್‌ನಿಂದ ಶ್ರದ್ಧಾಂಜಲಿ ಸಲ್ಲಿಕೆ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮನವರಿಗೆ ಜೆಡಿಎಸ್‌ನಿಂದ ಶ್ರದ್ಧಾಂಜಲಿ ಸಲ್ಲಿಕೆ

Telegram Group
Join Now

​ಮೂಡಿಗೆರೆ: ಜೆಡಿಎಸ್ ಮೂಡಿಗೆರೆ ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಪಕ್ಷದ ಕಚೇರಿಯಲ್ಲಿ ಶ್ರೀಮತಿ ಚನ್ನಮ್ಮನವರ ಶ್ರದ್ಧಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

​ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಅವರು, ಶ್ರೀಮತಿ ಚನ್ನಮ್ಮನವರ ಅಗಲಿಕೆಗೆ ತೀವ್ರ ಕಂಬನಿ ಮಿಡಿದರು. ಚನ್ನಮ್ಮನವರು ತಮ್ಮ ಜೀವನದುದ್ದಕ್ಕೂ ತೋರಿದ ಸಮಾಜಮುಖಿ ಕಾಳಜಿ, ಪಕ್ಷಕ್ಕೆ ಅವರು ನೀಡಿದ ಕೊಡುಗೆ ಹಾಗೂ ಅವರ ಸರಳ ವ್ಯಕ್ತಿತ್ವವನ್ನು ಸ್ಮರಿಸಿದ ಅವರು, ಅವರ ಅಗಲಿಕೆ ಪಕ್ಷ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಬಣ್ಣಿಸಿದರು.

​ಈ ಸಂದರ್ಭದಲ್ಲಿ ಮೂಡಿಗೆರೆ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಡಿ.ಜೆ. ಸುರೇಶ್, ಮಹಾ ಪ್ರಧಾನ ಕಾರ್ಯದರ್ಶಿ ಲೋಹಿತ್ ಬಿದರಹಳ್ಳಿ, ಬ್ಲಾಕ್ ಅಧ್ಯಕ್ಷ ಲಕ್ಷ್ಮಣಗೌಡ ಬಾಳೂರು, ಪಕ್ಷದ ಹಿರಿಯ ಮುಖಂಡರಾದ ಬೈರೇಗೌಡರು ಬಿದರಹಳ್ಳಿ ಹಾಗೂ ಯುವ ಜನತಾದಳ ಕಾರ್ಯಾಧ್ಯಕ್ಷ ಆದರ್ಶ ಬಾಳೂರು ಉಪಸ್ಥಿತರಿದ್ದರು.

​ಅಲ್ಲದೆ ಪಕ್ಷದ ನಾಯಕರು ಹಾಗೂ ಸಮಾಜ ಸೇವಕರಾದ ವಿಜಯಕುಮಾರ್, ಪ್ರಮುಖ ಮುಖಂಡರುಗಳಾದ ಮುಗ್ಧಮಕ್ಕಿ ರವಿ, ಜಕಾರಿಯ, ಪ್ರಹ್ಲಾದ ಜನ್ನಾಪುರ, ಪೂವಪ್ಪ, ಸಿದ್ದೇಶ್, ಸಂದೀಪ್, ಮನು, ಸುರೇಶ್, ಮಂಜುನಾಥ್ ಸೇರಿದಂತೆ ಹಲವು ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments