Monday, September 14, 2026
Homeಕ್ರೈಮ್Students Fall ill: ಹಾಸನದಲ್ಲಿ ಹಲ್ಲಿಬಿದ್ದ ಊಟ ಮಾಡಿ 15 ವಿದ್ಯಾರ್ಥಿನಿಯರು ಅಸ್ವಸ್ಥ!

Students Fall ill: ಹಾಸನದಲ್ಲಿ ಹಲ್ಲಿಬಿದ್ದ ಊಟ ಮಾಡಿ 15 ವಿದ್ಯಾರ್ಥಿನಿಯರು ಅಸ್ವಸ್ಥ!

Telegram Group
Join Now

ಹಾಸನ: ಹಲ್ಲಿ  ಬಿದ್ದ ಸಾಂಬಾರ್‌ನಲ್ಲಿ ಊಟ ಸೇವನೆ ಮಾಡಿದ 15 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಘಟನೆ ಹಾಸನ  ತಾಲೂಕಿನ, ಸಾರಾಪುರದಲ್ಲಿರುವ ಕೃಷಿ ವಿಜ್ಞಾನ ಕಾಲೇಜಿನಲ್ಲಿ ನಡೆದಿದೆ.

ಬುಧವಾರ ರಾತ್ರಿ ಊಟ ಮಾಡುವಾಗ ಸಾಂಬಾರ್‌ನಲ್ಲಿ ಹಲ್ಲಿ ಪತ್ತೆಯಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ಆರು ವಿದ್ಯಾರ್ಥಿಗಳಿಗೆ ಹಾಸನದ ಹಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಲಿಂಡರ್ ಕೊರತೆಯಿಂದ ಹೊರಗೆ ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿರುವುದರಿಂದ ಅಚಾತುರ್ಯ ನಡೆದಿದೆ ಎಂದು ಆರೋಪಿಸಲಾಗಿದೆ

ಸುಮಾರು 400 ವಿದ್ಯಾರ್ಥಿನಿಯರು ಇರುವ ಹಾಸ್ಟಲ್‌ಗೆ ಸಿಲಿಂಡರ್ ಸಿಗದೆ ಸಂಕಷ್ಟ ಎದುರಾಗಿದೆ. ವಾರಕ್ಕೆ ನಾಲ್ಕರಿಂದ ಆರು ವಾಣಿಜ್ಯ ಸಿಲಿಂಡರ್ ಅವಶ್ಯಕತೆ ಇದ್ದು, ಗ್ಯಾಸ್ ಏಜೆನ್ಸಿ ವಾರಕ್ಕೆ ಕೇವಲ ಒಂದು, ಎರಡು ಸಿಲಿಂಡರ್ ನೀಡುತ್ತಿದೆ. ಸಿಲಿಂಡರ್ ಸಿಗದೆ ಅಡುಗೆ ಮನೆಯ ಹೊರಗೆ ಸೌದೆ ಒಲೆಯಲ್ಲಿ ಅಡುಗೆ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಇದೇ ಕಾರಣದಿಂದ ಅಡುಗೆ ಮನೆಯಲ್ಲಿ ಶುಚಿತ್ವ ಇಲ್ಲದೇ ಹಲ್ಲಿ ಬಿದ್ದ ಆಹಾರ ಸೇವನೆ ಮಾಡಿ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ. ಹಿಮ್ಸ್ಗೆ ಡಿಹೆಚ್‌ಓ ಅನಿಲ್‌ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!