Thursday, April 9, 2026
Homeಜಿಲ್ಲಾಸುದ್ದಿ2026ನೇ 2nd PUC District Wise Result : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ 7ನೇ ಸ್ಥಾನ:...

2026ನೇ 2nd PUC District Wise Result : ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ 7ನೇ ಸ್ಥಾನ: ಹಾಸನಕ್ಕೆ 11ನೇ ಸ್ಥಾನ!

ಪ್ರಸಕ್ತ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ- 1 ರ ಫಲಿತಾಂಶ  ಏಪ್ರಿಲ್‌ 9ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಆನ್​​ಲೈನ್​​ನಲ್ಲಿ ಪ್ರಕಟಗೊಂಡಿದ್ದು, ಬಳಿಕ ಇದೀಗ ಶಿಕ್ಷಣ ಸಚಿವ ಮಧುಬಂಗಾರಪ್ಪ  ಅವರು ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಿದ್ದಾರೆ.

ಹೌದು .. 2025-26ನೇ ಸಾಲಿನ ಸೆಕೆಂಡ್ ಪಿಯುಸಿ ಪರೀಕ್ಷೆಯಲ್ಲಿ ಶೇ.86.48ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ. ಅಂದರೆ 7,10,363 ವಿದ್ಯಾರ್ಥಿಗಳ ಪೈಕಿ 6.10 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ.73.45ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಈ ಬಾರಿ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಇನ್ನು ಈ ಬಾರಿಯ ಫಲಿತಾಂಶದಲ್ಲಿ ಉಡುಪಿ ಪ್ರಥಮ ಸ್ಥಾನದಲ್ಲಿದ್ದರೆ, ಯಾದಗಿರಿಗೆ ಮತ್ತೆ ಕೊನೆ ಸ್ಥಾನ ಪಡೆದುಕೊಂಡಿದೆ.

ಈ ಬಾರಿಯ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮತ್ತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ.88.07ರಷ್ಟು ವಿದ್ಯಾರ್ಥಿನಿಯರು ಪಾಸಾಗಿದ್ದರೆ, ಶೇಕಡಾ 83.65 ವಿದ್ಯಾರ್ಥಿಗಳು ಪಾಸಾಗಿದ್ದಾರೆ.ಇನ್ನು ಕಲಾ ವಿಭಾಗದಲ್ಲಿ ಶೇಕಡಾ 72.86ರಷ್ಟು ಫಲಿತಾಂಶ ಬಂದಿದ್ದರೆ, ವಾಣಿಜ್ಯ ವಿಭಾಗದಲ್ಲಿ ಶೇಕಡಾ 88.04ರಷ್ಟು ಫಲಿತಾಂಶ ಹಾಗೂ ವಿಜ್ಞಾನ ವಿಭಾಗದಲ್ಲಿ ಶೇಕಡಾ 91.69ರಷ್ಟು ಫಲಿತಾಂಶ ಬಂದಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಜಿಲ್ಲಾವಾರು ಫಲಿತಾಂಶ ಹೀಗಿದೆ ನೋಡಿ:

  1. ಉಡುಪಿ – 96.39%
  2. ದಕ್ಷಿಣ ಕನ್ನಡ – 96.35%
  3. ಕೊಡಗು – 92.34%
  4. ವಿಜಯಪುರ – 92%
  5. ಉತ್ತರ ಕನ್ನಡ – 91.78%
  6. ಬೆಂಗಳೂರು ಗ್ರಾಮಾಂತರ – 91.00%
  7. ಚಿಕ್ಕಮಗಳೂರು – 90.80%
  8. ಬೆಂಗಳೂರು ದಕ್ಷಿಣ – 90.55%
  9. ಚಿಕ್ಕಬಳ್ಳಾಪುರ – 90.24%
  10. ಬೆಂಗಳೂರು ಉತ್ತರ – 90.05%
  11. ಹಾಸನ – 89.71%
  12. ಮಂಡ್ಯ – 88.85%
  13. ರಾಮನಗರ – 87.90%
  14. ಕೋಲಾರ – 87.38%
  15. ಶಿವಮೊಗ್ಗ – 87.62%
  16. ತುಮಕೂರು – 86.89%
  17. ಕೊಪ್ಪಳ – 86.80%
  18. ಚಾಮರಾಜನಗರ – 84.68%
  19. ಮೈಸೂರು – 84.80%
  20. ಬೀದರ್ – 84.61%
  21. ಬಾಗಲಕೋಟೆ – 84.12%
  22. ಹಾವೇರಿ – 84.11%
  23. ಧಾರವಾಡ – 83.31%
  24. ಚಿಕ್ಕೋಡಿ – 83.10%
  25. ದಾವಣಗೆರೆ – 81.99%
  26. ಬೆಳಗಾವಿ – 80.32%
  27. ಚಿತ್ರದುರ್ಗ – 79.12%
  28. ಬಳ್ಳಾರಿ – 78.69%
  29. ಕಲಬುರಗಿ – 76.97%
  30. ಗದಗ – 76.65%
  31. ರಾಯಚೂರು – 74.09%
  32. ಯಾದಗಿರಿ – 71.21%
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!