ಬಾಳೆಹೊನ್ನೂರು : ಶ್ರದ್ಧಾ ಭಕ್ತಿಯಿಂದ ನಡೆಯುವ ನವರಾತ್ರಿ ಉತ್ಸವ ಬಾಳೆಹೊನ್ನೂರಿನಲ್ಲಿಯೂ ಈ ಬಾರಿ ಜೋರಾಗಿದೆ…
16ನೇ ವರ್ಷದ ನವರಾತ್ರಿ ಉತ್ಸವ ಬಾಳೆಹೊನ್ನೂರಿನ ಮಾರ್ಕಂಡೇಶ್ವರ ದೇವಸ್ಥಾನದ ಆವರಣದಲ್ಲಿ ದುರ್ಗಾದೇವಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ
ಪ್ರತಿದಿನ ವಿಶೇಷ ಕಾರ್ಯಕ್ರಮಗಳು ಭಕ್ತರಿಗೆ ಪ್ರತಿದಿನ ಅನ್ನ ಸಂತರ್ಪಣೆ ವಿಶೇಷ ಗಣ್ಯರ ಆಗಮನದೊಂದಿಗೆ ಬಾಳೆಹೊನ್ನೂರು ದಸರಾ ಈ ಬಾರಿ ಅದ್ದೂರಿಯಾಗಿ ನಡೆಯುತ್ತಿದೆ.
ಕೊನೆಯ ದಿನ ಅಂದರೆ :02-10-2025 ಗುರುವಾರ ಶ್ರೀ ದುರ್ಗಾದೇವಿಯ ಜಲ ಸ್ತಂಭನಾ ಶೋಭಾ ಯಾತ್ರೆ ನಡೆಯಲಿದೆ. ಈ ಶೋಭಾ ಯಾತ್ರೆಯಲ್ಲಿ 15 ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ ಹಾಗೂ ಶೋಭಾದುರ್ಗಾದೇವಿ ಯಾತ್ರೆಯಲ್ಲಿ ರಾಜ್ಯ ಮತ್ತು ಅಂತರ್ ರಾಜ್ಯ ಮಟ್ಟದ ವಿಶೇಷ 20ಕ್ಕೂ ಹೆಚ್ಚು ಕಲಾತಂಡಗಳು ಬಾಳೆಹೊನ್ನೂರಿನ ರಾಜ ಬೀದಿಯಲ್ಲಿ ವಿಶೇಷ ಪ್ರದರ್ಶನ ನೀಡಲಿವೆ
