Wednesday, August 12, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಕ್ಷೇತ್ರದ ಯುವ ಕಾರ್ಯಕರ್ತ ಲಾಕೇಶ್ ಮನೆಗೆ ಸಚಿವ ಸಂತೋಷ್ ಲಾಡ್ ಭೇಟಿ!

ಚಿಕ್ಕಮಗಳೂರು: ಕ್ಷೇತ್ರದ ಯುವ ಕಾರ್ಯಕರ್ತ ಲಾಕೇಶ್ ಮನೆಗೆ ಸಚಿವ ಸಂತೋಷ್ ಲಾಡ್ ಭೇಟಿ!

Telegram Group
Join Now

ಚಿಕ್ಕಮಗಳೂರು: ಸಾಮಾನ್ಯವಾಗಿ ಸಚಿವರು ಜಿಲ್ಲಾ ಪ್ರವಾಸ ಕೈಗೊಂಡಾಗ ನಿಗದಿತ ಕಾರ್ಯಕ್ರಮಗಳನ್ನ ಮುಗಿಸಿಕೊಂಡು ಹೋಗುತ್ತಾರೆ. ಇನ್ನೂ ಕೆಲವರು ಶಾಸಕರು, ಮುಖಂಡರ ಮನೆಗೆ ಹೋಗಿ ಮಾತುಕತೆ ನಡೆಸ್ತಾರೆ. ಆದ್ರೆ ಸಂತೋಷ್ ಲಾಡ್ ವಿಚಾರದಲ್ಲಿ ಅದು ಉಲ್ಟಾ ಆಗಿದೆ.

ಹೌದು, ಸಾಮಾನ್ಯರಲ್ಲಿ ಸಾಮಾನ್ಯರಿಗೂ ಸಚಿವ ಸಂತೋಷ್ ಲಾಡ್ ಆದ್ಯತೆ ಕೊಡ್ತಾರೆ, ಅವರ ಬಗ್ಗೆ ಕಾಳಜಿ ವಹಿಸ್ತಾರೆ ಅನ್ನೋದಕ್ಕೆ ಇಂದು ನಡೆದ ಘಟನೆಯೇ ಸಾಕ್ಷಿ. ಹೌದು, ಇಂದು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದ ಸಂತೋಷ್ ಲಾಡ್, ಕೈ ಕಾರ್ಯಕರ್ತ ಲಾಕೇಶ್ ಮನೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ರು.

ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿರೋ ಲಾಕೇಶ್, ಬದ್ದತೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿ, ಉಜ್ವಲ ಭವಿಷ್ಯಕ್ಕಾಗಿ ಹಾರೈಸಿದ್ರು. ಸಚಿವರು ಮನೆಗೆ ಬಂದಿದ್ದನ್ನ ಕಂಡು, ಖುಷಿಯಾದ ಲಾಕೇಶ್ ಸಚಿವರ ಸರಳತೆಗೆ ಫಿದಾ ಆಗ್ಬಿಟ್ಟ.

ಇನ್ನೂ ಇದೆ ವೇಳೆ ಬಾಬಾ ಸಾಹೇಬ್ ಅಂಬೇಡ್ಕರ್, ಹಾಗೂ ಬುದ್ಧನ ವಿಗ್ರಹಕ್ಕೆ ಸಚಿವ ಸಂತೋಷ್ ಲಾಡ್ ಪುಷ್ಪಾರ್ಚನೆ ಮಾಡಿದ್ರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments