Saturday, August 8, 2026
Homeಕ್ರೈಮ್ಹಾಸನದಲ್ಲಿ ಯುವಕನ ಭೀಕರ ಹತ್ಯೆ: ಲವ್ ಬ್ರೇಕಪ್ ಸಂಬಂಧ ಯುವತಿ ಕಡೆಯವರಿಂದ ಕೊಲೆ!

ಹಾಸನದಲ್ಲಿ ಯುವಕನ ಭೀಕರ ಹತ್ಯೆ: ಲವ್ ಬ್ರೇಕಪ್ ಸಂಬಂಧ ಯುವತಿ ಕಡೆಯವರಿಂದ ಕೊಲೆ!

Telegram Group
Join Now

ಹಾಸನ: ಲವ್ ಬ್ರೇಕಪ್ ಸಂಬಂಧ ಯುವತಿ ಕಡೆಯವರಿಂದ ಯುವಕನ ಬರ್ಬರ ಹತ್ಯೆಗೈದು ಆ ನಂತರ ದುಷ್ಕರ್ಮಿಗಳು ಮೃತದೇಹದ ಮೇಲೆ ಗಿಡಗಳನ್ನು ಮುಚ್ಚಿರುವ ಘಟನೆ ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು ಹೋಬಳಿ, ಎಸ್.ಅಂಕನಹಳ್ಳಿ ಗ್ರಾಮದ ಬಳಿ ನಡೆದಿದೆ.

ಹೊಳೆನರಸೀಪುರ ಪಟ್ಟಣದ ನರಸಿಂಹನಾಯಕ ನಗರದ ಸುದೀಪ (24) ಕೊಲೆಯಾದ ಯುವಕನಾಗಿರುತ್ತಾನೆ ಹಾಸನದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದನು

ಮೈಸೂರ ಜಿಲ್ಲೆ, ಕೆ.ಆರ್.ನಗರ ಮೂಲದ ಯುವತಿಯನ್ನ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಸುದೀಪ್ ಲವ್ ಬ್ರೇಕಪ್ ಸಂಬಂಧ ಯುವತಿ ಕಡೆಯವರು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಬೈಕ್‌ನಲ್ಲಿ ಹೋಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಗಟ್ಟಿ ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಅಪಘಾತವೆಂದು ಬಿಂಬಿಸಲು ಯತ್ನಿಸಿರುವ ಕೀಚಕರು ಹಾಗೆ ಬೈಕ್ ಹಾಗೂ ಶವವನ್ನು ರಸ್ತೆ ಪಕ್ಕಕ್ಕೆ ಎಳೆದು ಹಾಕಿರುವ ದುರುಳರು ನಂತರ ಯುವಕನ ಶವಕ್ಕೆ ಗಿಡಗಳನ್ನು ಮುಚ್ಚಿ ಎಸ್ಕೇಪ್ ಆಗಿರುವ ಕೊಲೆಗಡುಕರು

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments