ಕಾಫಿ ತೋಟದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪ ಗುಲ್ಲನ್ ಪೇಟೆಯ ಅಬ್ದುಲ್ ಬಷೀರ್ ಎಂಬುವರು ತಮ್ಮ ಕಾಫಿ ತೋಟದಲ್ಲಿ ಆಕ್ರಮವಾಗಿ ಬೆಳೆದ್ದಿದ್ದ 12 ಗಾಂಜಾ ಗಿಡಗಳನ್ನು ಆಲ್ದೂರು ಪೊಲೀಸ್ ಠಾಣೆಯ ಪಿ.ಎಸ್.ಐ. ತಂಡದವರು ವಶಪಡಿಸಿಕೊಂಡಿದ್ದಾರೆ.

ಆಲ್ದೂರಿನಲ್ಲಿ ಮಾತ್ರವಲ್ಲದೇ ಒಂದೇ ದಿನ ಜಿಲ್ಲೆಯ ಕಡೂರು ಪಟ್ಟಣದ ಹಳೇ ಸಂತೆ ಮೈದಾನದಲ್ಲಿ ಗಾಂಜಾ ಮಾರಾಟ ಬೆಳಕಿಗೆ ಬಂದಿದೆ.
ನಗರದಲ್ಲಿ ಸೂರ್ಯ ಹೆಚ್ ಕೆ ಎಂಬುವನು ಗಾಂಜಾ ಮಾರಾಟತ್ತಿದ್ದವನನ್ನು ಕಡೂರು ಪೊಲೀಸ್ ಠಾಣೆಯ ಪಿ.ಎಸ್.ಐ. ತಂಡ ಆರೋಪಿಯನ್ನು ವಶಕ್ಕೆ ಪಡೆದು 316 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು, ಸೂರ್ಯ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.