ಚಿಕ್ಕಮಗಳೂರು: ನಗರದಲ್ಲಿ ಚಲಿಸುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಹೊತ್ತಿ ಉರಿದ ಘಟನೆ ನಡೆದಿದ್ದು ಕೂಡಲೇ ಬಸ್ ನಿಂದ ಪ್ರಯಾಣಿಕರು ಇಳಿದಿದ್ದಾರೆ. ಅದೃಷ್ಟವಶಾತ್ ಯಾರಿಗೂ ಹಾನಿ ಸಂಭವಿಸಿಲ್ಲ.
ಹೌದು .. ಚಿಕ್ಕಮಗಳೂರು ಬಸ್ ನಿಲ್ದಾಣದಿಂದ ಬೇಲೂರು ಮಾರ್ಗವಾಗಿ ಹೊರಟಿದ್ದ ಬಸ್ ನಗರದ ಆಜಾದ್ ಪಾರ್ಕ್ ಬಳಿ ಬೆಂಕಿಗೆ ಆಹುತಿಯಾಗಿದೆ. ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡಿದ್ದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ಕೆಲಕಾಲ ಆತಂಕಕ್ಕೆ ಒಳಗಾದರು. ಕೂಡಲೇ ಬಸ್ಸಿಂದ ಇಳಿದ ಪ್ರಯಾಣಿಕರು, ಬದುಕಿತು ಬಡ ಜೀವ ಅಂತಾ ನಿಟ್ಟುಸಿರು ಬಿಟ್ಟರು.

ಗ್ಯಾರಂಟಿ ಯೋಜನೆಯಿಂದಾಗಿ ಬಸ್ ಗಳ ಸುರಕ್ಷತೆ ಕಡೆಗೆ ಮುಖ ಮಾಡ್ತಿಲ್ಲ ಅಂತಾ ಪ್ರಯಾಣಿಕರು, ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

