Sunday, July 26, 2026
Homeಜಿಲ್ಲಾಸುದ್ದಿಕಳಸ: ಕೇತುಗ್ರಸ್ತ ಚಂದ್ರಗ್ರಹಣ ಹಿನ್ನೆಲೆ: ಹೊರನಾಡು ಅನ್ನಪೂರ್ಣೇಶ್ವರಿಗೆ ನಿರಂತರ ಜಲಾಭಿಷೇಕ

ಕಳಸ: ಕೇತುಗ್ರಸ್ತ ಚಂದ್ರಗ್ರಹಣ ಹಿನ್ನೆಲೆ: ಹೊರನಾಡು ಅನ್ನಪೂರ್ಣೇಶ್ವರಿಗೆ ನಿರಂತರ ಜಲಾಭಿಷೇಕ

Telegram Group
Join Now

ಹೊರನಾಡು: ಕೇತುಗ್ರಸ್ತ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಹೊರನಾಡು ಅನ್ನಪೂರ್ಣೇಶ್ವರಿಗೆ ಜಲಾಭಿಷೇಕ ಕೈಗೊಂಡಿದ್ದು ಗ್ರಹಣ ಆರಂಭದಿಂದ ಅಂತ್ಯದವರೆಗೂ ನಿರಂತರ ಜಲಾಭಿಷೇಕ ನಡೆಯಲಿದೆ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

ಹೌದು .. ಕಳಸ ತಾಲೂಕಿನ ಭದ್ರಾ ನದಿ ತಟದಲ್ಲಿರುವ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ತಾಯಿಗೆ ನಿರಂತರ ಜಲಾಭಿಷೇಕ ಕೈಗೊಂಡಿದ್ದು ಗ್ರಹಣ ಆರಂಭದಿಂದ ಅಂತ್ಯದವರೆಗೂ ಇದು ನಡೆಯಲಿದೆ. ಸತತ ಮೂರೂವರೆ ಗಂಟೆಗಳ ಕಾಲ ನಿರಂತರವಾಗಿ ಅನ್ನಪೂರ್ಣೇಶ್ವರಿ ದೇವಿ, ಉದ್ಭವ ಗಣಪತಿಗೂ ನಿರಂತರ ಜಲಾಭಿಷೇಕ ಎಂದು ತಿಳಿಸಿದ್ದಾರೆ. ಈ ಮಧ್ಯ ಗ್ರಹಣ ಮುಗಿಯುವರೆಗೂ ದೇವಾಲಯದಲ್ಲಿ ಭಕ್ತರಿಗೆ ಪ್ರವೇಶವಿಲ್ಲ, ಹಾಘೆ ಪ್ರಸಾದ, ಪೂಜೆ ಯಾವುದೂ ಇಲ್ಲವೆಂದು ಆಡಳಿತ ಮಂಡಳಿ ತಿಳಿಸಿದೆ.

ರಾತ್ರಿ 9 ಗಂಟೆಗೆ ದೇವಿಗೆ ಮಹಾಮಂಗಳಾರತಿ ಮಾಡಲಿದ್ದು ಸಂಜೆ 7 ಗಂಟೆ ಬಳಿಕ ಭಕ್ತರಿಗೆ ಅವಕಾಶ ಹಾಘೂ ದರ್ಶನದ ವ್ಯವಸ್ಥೆ ಇದ್ದು ಪೂಜೆ-ಪ್ರಸಾದ ವಿನೋಗ ಮಾಡಲಾಗುತ್ತದೆ.

ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments