Sunday, July 26, 2026
Homeಜಿಲ್ಲಾಸುದ್ದಿಬೇಲೂರು -ಮೂಡಿಗೆರೆ ಗಡಿ ಭಾಗದಲ್ಲಿ ಎರಡು ಮರಿಯಾನೆಗಳೊಂದಿಗೆ ಕಾಡಾನೆ ಫುಲ್‌ ರೌಂಡ್ಸ್!

ಬೇಲೂರು -ಮೂಡಿಗೆರೆ ಗಡಿ ಭಾಗದಲ್ಲಿ ಎರಡು ಮರಿಯಾನೆಗಳೊಂದಿಗೆ ಕಾಡಾನೆ ಫುಲ್‌ ರೌಂಡ್ಸ್!

Telegram Group
Join Now

ಮೂಡಿಗೆರೆ: ಕಾಫಿನಾಡಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ. ಈ ಕಾಡಾನೆಗಳ ಉಪಟಳಕ್ಕೆ ಬ್ರೇಕ್​​ ಬೀಳುವ ಯಾವುದೇ ಲಕ್ಷಣ ಸದ್ಯಕ್ಕೆ ಮಾತ್ರ ಕಾಣುತ್ತಿಲ್ಲ ಎಂದರೆ ತಪ್ಪಾಗಲಾರದು. ಮೂಡಿಗೆರೆ ತಾಲೂಕಿನ ಸುತ್ತಾಮುತ್ತ ಕಾಡಾನೆ ಹಾವಳಿ ಹೆಚ್ಚಾಗಿದ್ದು ಜನರು ಆತಂಕದಲ್ಲೇ ಇರಬೇಕಾದ ಸ್ಥಿತಿ ಒದಗಿಬಂದಿದೆ.‌

ಹೌದು .. ಕಳೆದ ಒಂದು ವಾರದಿಂದ ಮೂಡಿಗೆರೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ಕಾಡಾನೆಗಳ ಓಡಾಟ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಮನೆಮಾಡಿದ್ದು ಅಲ್ಲಿನ ನಿವಾಸಿಗಳ ನಿದ್ದೆಗೆಡಿಸಿದೆ.

ಬೇಲೂರು -ಮೂಡಿಗೆರೆ ಗಡಿ ಭಾಗದಲ್ಲಿ ಎರಡು ಮರಿಯಾನೆಗಳೊಂದಿಗೆ ಕಾಡಾನೆಗಳ ಹಿಂಡು ಸಂಚಾರ ಮಾಡುತ್ತಿವೆ. ಕಾಡಾನೆಗಳ ಸಂಚಾರ ಹೆಚ್ಚಳ ಹಿನ್ನೆಲೆ, ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments