ಚಿಕ್ಕಮಗಳೂರು :ಮಾಜಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಚಿವ ಸಿ.ಟಿ. ರವಿ ಅವರ ಹೇಳಿಕೆ ವಿರುದ್ಧ ದಲಿತ ಸಂಘಟನೆಗಳ ಬೃಹತ್ ಪ್ರತಿಭಟನೆಗೆ ದಲಿತ ಒಕ್ಕೂಟ ಸಂಘಟನೆ ಕರೆ ನೀಡಲಾಗಿದೆ
ಯತ್ನಾಳ್ ಮತ್ತು ಸಿ.ಟಿ. ರವಿ ಅವರ ಬೇಜವಾಬ್ದಾರಿ ಹೇಳಿಕೆಗಳ ವಿರುದ್ಧ ದಲಿತ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆಗೆ ದಲಿತ ಒಕ್ಕೂಟ ಸಂಘಟನೆಗಳು ಕರೆ ನೀಡಿದೆ.
ಈ ಕುರಿತು ಸುದ್ದಿಗಾರರೊಂದಿಗೆ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಮಿತಿ ಸದಸ್ಯೆ ಆಶಾ ಸಂತೋಷ್ ಮಾತನಾಡಿ, ದಲಿತ ಹೆಣ್ಣುಮಕ್ಕಳ ಸ್ವಾಭಿಮಾನ ಮತ್ತು ಘನತೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿರುವ ಮಾಜಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಚಿವ ಸಿ.ಟಿ. ರವಿ ಅವರ ವಿರುದ್ಧ ದಲಿತ ಸಂಘಟನೆಗಳ ಬೃಹತ್ ಪ್ರತಿಭಟನೆಗೆ ದಲಿತ ಒಕ್ಕೂಟ ಸಂಘಟನೆ ಒಕ್ಕೂಟವು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತದೆ.
ಈ ಹೇಳಿಕೆಗಳನ್ನು ಖಂಡಿಸಿ ದಿನಾಂಕ 22.9.2025ರ ಸೋಮವಾರ ಬೆಳಗ್ಗೆ 11.30ಕ್ಕೆ ನಗರದ ಆಜಾದ್ ಪಾರ್ಕ್ ಬಳಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
“ಯತ್ನಾಳ್ ಅವರು ‘ದಲಿತ ಹೆಣ್ಣುಮಕ್ಕಳಿಗೆ ಚಾಮುಂಡೇಶ್ವರಿ ದೇವಸ್ಥಾನ ಪ್ರವೇಶವಿಲ್ಲ’ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದರೆ, ಸಿ.ಟಿ. ರವಿ ಅವರು ಪ್ರಿಯಾಂಕಾ ಖರ್ಗೆ ಅವರ ಬಗ್ಗೆ ‘ಬೆರಕೆಗೆ ಹುಟ್ಟಿದವರು’ ಎಂಬ ಅಸಂಬದ್ಧ ಹೇಳಿಕೆ ನೀಡಿ ನಮ್ಮ ಸಮುದಾಯದ ಘನತೆಗೆ ಧಕ್ಕೆ ತಂದಿದ್ದಾರೆ.
ಇಂತಹ ಹೇಳಿಕೆಗಳು ಕೇವಲ ದಲಿತರನ್ನಷ್ಟೇ ಅಲ್ಲದೆ, ಇಡೀ ಮಾನವ ಸಮುದಾಯ ಮತ್ತು ಸಂವಿಧಾನವನ್ನೂ ಅವಮಾನಿಸಿದಂತಾಗಿದೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಟ್ಟಿದ ಈ ದೇಶದಲ್ಲಿ ಇಂತಹ ದ್ವೇಷಪೂರಿತ ಮಾತುಗಳಿಗೆ ಅವಕಾಶವಿರುವುದಿಲ್ಲ.
ನಮ್ಮ ದಲಿತ ನಾಯಕರ, ಮತ್ತು ಹೆಣ್ಣುಮಕ್ಕಳ ಸ್ವಾಭಿಮಾನಕ್ಕೆ ಧಕ್ಕೆ ತಂದಿರುವ ಇಂತಹ ಜನಪ್ರತಿನಿಧಿಗಳ ಹೇಳಿಕೆಗಳಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದರು.
ಇಂತಹ ಬೇಜವಾಬ್ದಾರಿ ಹೇಳಿಕೆಗಳು ಪುನರಾವರ್ತನೆಯಾಗದಂತೆ ತಡೆಯಲು ಈ ಪ್ರತಿಭಟನೆ ಒಂದು ಎಚ್ಚರಿಕೆಯ ಕರೆ ಘಂಟೆ . ನಮ್ಮ ಹೋರಾಟ ಕೇವಲ ವೈಯಕ್ತಿಕ ಘಟನೆಯ ವಿರುದ್ಧವಲ್ಲ, ಬದಲಾಗಿ ಸಮಾಜದಲ್ಲಿ ಜಾತಿ ವೈಷಮ್ಯವನ್ನು ಬಿತ್ತುತ್ತಿರುವ ವ್ಯವಸ್ಥೆಯ ವಿರುದ್ಧವಾಗಿದೆ ಎಂದು ತಿಳಿಸಿದರು
ವರದಿ :ಪುನೀತ್ ಕಡಿದಾಳ್
9483811948
