Wednesday, August 12, 2026
Homeಜಿಲ್ಲಾಸುದ್ದಿಮೂಡಿಗೆರೆ: ಗಣಪತಿ ಮೂರ್ತಿ ಚಪ್ಪಲಿ ಹಾರ ಕೇಸ್:‌ ಭಜರಂಗದಳ ತಾಲೂಕು ಅಧ್ಯಕ್ಷ ಸಂತೋಷ್ ಶುಭನಗರ...

ಮೂಡಿಗೆರೆ: ಗಣಪತಿ ಮೂರ್ತಿ ಚಪ್ಪಲಿ ಹಾರ ಕೇಸ್:‌ ಭಜರಂಗದಳ ತಾಲೂಕು ಅಧ್ಯಕ್ಷ ಸಂತೋಷ್ ಶುಭನಗರ ಖಂಡನೆ

Telegram Group
Join Now

ಮೂಡಿಗೆರೆ :ಬೇಲೂರು ಗಣಪತಿ ಮೂರ್ತಿ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳ ಬಂಧನಕ್ಕೆ ಬಜರಂಗದಳ ತಾಲೂಕು ಅಧ್ಯಕ್ಷ ಸಂತೋಷ್ ಶುಭನಗರ ಆಗ್ರಹ ಪಡಿಸಿದ್ದಾರೆ.

​ಹೌದು .. ಬೇಲೂರು ಗಣೇಶ ಮೂರ್ತಿ ಚಪ್ಪಲಿ ಹಾರ ಹಾಕಿದ ಘಟನೆ ಕುರಿತು ವಿಶ್ವ ಹಿಂದೂ ಪರಿಷತ್ ಭಜರಂಗದಳದ ಮೂಡಿಗೆರೆ ಮಂಡಲದ ಅಧ್ಯಕ್ಷ ಸಂತೋಷ ಶುಭನಗರ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಅವರು ಹಾಸನ ಜಿಲ್ಲೆ ಬೇಲೂರು ನಗರದಲ್ಲಿ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದವರನ್ನು ಬಂಧಿಸಬೇಕು. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಹಾಗೆಯೇ ಇಂತಹ ಕೃತ್ಯ ಖಂಡನಿಯ ಹಿಂದೂಗಳ ಭಾವನಾತ್ಮಕ ವಿಚಾರಗಳಿಗೆ ದಕ್ಕೆ ತಂದಿದ್ದು. ಇಂತವರ ವಿರುದ್ಧ ಕಾನೂನು ಸಮರಕ್ಕೆ ಕಾರ್ಯಕರ್ತರು ಸಿದ್ದರಿದ್ದು ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರವು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು

‘ನಮ್ಮ ಹಿಂದೂ ಧರ್ಮ, ಧಾರ್ಮಿಕ ಕೇಂದ್ರ, ಆಚಾರ, ಸಂಪ್ರದಾಯಗಳ ಮೇಲೆ ಕೆಲವು ಕಿಡಿಗೇಡಿಗಳು ವಿನಾಕಾರಣ ದಬ್ಬಳಿಕೆ ಮಾಡುವ ಪ್ರಯತ್ನದಲ್ಲಿದ್ದು ಇಂತವರವನ್ನು ಮೆಟ್ಟುವ ಸಾಮರ್ಥ್ಯ ಹಿಂದೂ ಸಂಘಟನೆಗಳಿಗಿದೆ ಎಂದು ಆಕ್ರೋಶ ಹೊರ ಹಾಕಿದರು.

ಇಂಥ ಕಿಡಿಗೇಡಿಗಳಿಂದ ಧರ್ಮಗಳ ಮಧ್ಯೆ ಸಾಮರಸ್ಯದ ಬದಲಿಗೆ ವೈಷಮ್ಯ ಹೆಚ್ಚುತ್ತಿದೆ. ಗಣೇಶ ಮೂರ್ತಿ ಕೊರಳಿಗೆ ಚಪ್ಪಲಿ ಹಾರ ಹಾಕಿದದವರನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಅಗ್ರಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments