Saturday, July 18, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಗಿರಿ ಭಾಗದ ಪ್ರವಾಸಿಗರ ಗಮನಕ್ಕೆ: ಇಂದಿನಿಂದ ಮಾ.6ರವರೆಗೆ ಆನ್‌ ಲೈನ್‌ ಬುಕ್ಕಿಂಗ್‌ ಸ್ಥಗಿತ!

ಚಿಕ್ಕಮಗಳೂರು: ಗಿರಿ ಭಾಗದ ಪ್ರವಾಸಿಗರ ಗಮನಕ್ಕೆ: ಇಂದಿನಿಂದ ಮಾ.6ರವರೆಗೆ ಆನ್‌ ಲೈನ್‌ ಬುಕ್ಕಿಂಗ್‌ ಸ್ಥಗಿತ!

Telegram Group
Join Now

ಚಿಕ್ಕಮಗಳೂರು:  ನಗರದ ಪ್ರಸಿದ್ಧ ತಾಣವಾದ   ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ ಹಾಗೂ ಗಾಳಿಕೆರೆಗೆ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಸೆಪ್ಟಂಬರ್‌ ರಿಂದ ಆನ್‌ ಲೈನ್‌ ಬುಕ್ಕಿಂಗ್‌ ಕಡ್ಡಾಯ ಮಾಡಲಾಗಿದೆ.

ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಸ್ಥೆಯಲ್ಲಿ ಮಾರ್ಚ್ ಉರುಸ್ ಕಾರ್ಯಕ್ರಮ ಸೇರಿದಂತೆ ಸ್ಥಳೀಯ ಕಾರ್ಯಕ್ರಮಗಳಿದ್ದರೆ ಆನ್‌ ಲೈನ್‌ ಬುಕ್ಕಿಂಗ್‌ ಸ್ಥಗಿತಗೊಳಿಸಲಾಗುವುದು ಅದರಂತೆ ಮಾರ್ಚ್‌ 2ರಿಂದ 6ರವರೆಗೆ ಆನ್‌ ಲೈನ್‌ ಬುಕ್ಕಿಂಗ್‌ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ.

ಮಾರ್ಚ್ 2 ಮತ್ತು 3 ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿಯಲ್ಲಿ ಸ್ಥಳೀಯ ಜಾತ್ರೆಗಳು ನಡೆಯಲಿದ್ದು ಹಾಗೂ ಮಾರ್ಚ್‌4ರಿಂದ 6ರವರೆಗೆ ಉರುಸ್ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಆನ್‌ ಲೈನ್‌ ಬುಕ್ಕಿಂಗ್‌ ಇರುವುದಿಲ್ಲ ಸ್ಥಳೀಯರಿಗೆ ಮುಕ್ತ ಅವಕಾಶಕ್ಕೆ ಪ್ರವೇಶವಿರುತ್ತದೆ.

ಈ ವೇಳೆ ಮುಳ್ಳಯ್ಯನಗಿರಿ ಪ್ರದೇಶದ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವ, ಒಯ್ಯುವ ಮತ್ತು ಮಾರಾಟ ಮಾಡುವ ಕ್ರಮಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿರುತ್ತದೆ.

ಈ ಆದೇಶದ ಪ್ರಕಾರ ಉಪಯೋಗಿಸಿ ಎಸೆಯುವ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ಚಿಪ್ಸ್ ಪ್ಯಾಕೇಟ್‌ಗಳು, ಗುಟ್ಕಾ ಪ್ಯಾಕೇಟ್‌ಗಳು ಹಾಗೂ ಇದೇ ರೀತಿಯ ತಿನ್ನಲು ಯೋಗ್ಯವೆಂದು ಪ್ಯಾಕ್ ಮಾಡಿರುವ ಇತರೆ ಪ್ಲಾಸ್ಟಿಕ್ ಪ್ಯಾಕೇಟ್‌ಗಳ ಕೊಂಡೊಯ್ಯುವಿಕೆ, ಬಳಕೆ ಮತ್ತು ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments