Saturday, July 18, 2026
Homeಜಿಲ್ಲಾಸುದ್ದಿಶೃಂಗೇರಿ: ನಾಳೆ ರಕ್ತ ಚಂದ್ರಗ್ರಹಣ: ಶೃಂಗೇರಿ ಶಾರದಾಂಬ ದೇಗುಲದಲ್ಲಿ ಭಕ್ತರಿಗೆ ದರ್ಶನಕ್ಕೆ ಮುಕ್ತ ಅವಕಾಶ!

ಶೃಂಗೇರಿ: ನಾಳೆ ರಕ್ತ ಚಂದ್ರಗ್ರಹಣ: ಶೃಂಗೇರಿ ಶಾರದಾಂಬ ದೇಗುಲದಲ್ಲಿ ಭಕ್ತರಿಗೆ ದರ್ಶನಕ್ಕೆ ಮುಕ್ತ ಅವಕಾಶ!

Telegram Group
Join Now

ಶೃಂಗೇರಿ: ವರ್ಷದ ಮೊದಲ ಚಂದ್ರಗ್ರಹಣ ಹೋಳಿ ಹುಣ್ಣಿಮೆಯ ದಿನದಂದು ಸಂಭವಿಸುತ್ತಿದೆ. ಇದನ್ನು ಬ್ಲಡ್ ಮೂನ್ ಎಂದೂ ಕರೆಯಲಾಗುತ್ತದೆ. ಆದರೆ ಶೃಂಗೇರಿ ಶಾರದಾಂಬ ದೇಗುಲದಲ್ಲಿ ಭಕ್ತರಿಗೆ ಯಾವುದೇ ನಿರ್ಬಂಧವನ್ನು ವಹಿಸಿಲ್ಲ ಎಂದಿನಂತೆ ಪೂಜೆಗಳು ನಡೆಯಲಿವೆ.

ಈ ಮಧ್ಯೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬ ದೇಗುಲದಲ್ಲಿ ಭಕ್ತರಿಗೆ ಯಾವುದೇ ನಿರ್ಬಂಧವನ್ನು ವಹಿಸಿಲ್ಲ. ಗ್ರಹಣದ ಅವಧಿಯಲ್ಲೂ ಶೃಂಗೇರಿ ಶಾರದಾಂಬ ದೇಗುಲಕ್ಕೆ ಪ್ರವೇಶವಿದ್ದು ಎಂದಿನಂತೆ ಪೂಜಾ ಕೈಂಕರ್ಯಗಳು ನಡೆಯಲಿದ್ದು ಭಕ್ತರು ಬರಲು ಅವಕಾಶವಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಅದೇ ರೀತಿ ದೇವಸ್ಥಾನದ ಪೂಜಾ ಕೈಂಕರ್ಯಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದಿನಂತೆ ಸುಗಮವಾಗಿ ನಡೆಯಲಿದೆ. ದೇವಸ್ಥಾನದ ಬಾಗಿಲು ಮುಚ್ಚುವುದಿಲ್ಲ ಎಂದಿನಂತೆ ದೇವಸ್ಥಾನಕ್ಕೆ ಭಕ್ತರು ಪ್ರವೇಶ ಮಾಡಿ ತಾಯಿಯ ಆಶೀರ್ವಾದ ಪಡೆಯಬಹುದು. ಆದರೆ ವಿಶೇಷವಾದ ರೀತಿಯಲ್ಲಿ ಪೂಜೆ ಹೋಮ ಹವನಗಳು ನಡೆಯುವುದಿಲ್ಲವೆಂದು ಮಠದ ಮೂಲಗಳು ತಿಳಿಸಿವೆ.

ಮಾ.3 ರಂದು ರಕ್ತಚಂದ್ರ ಗ್ರಹಣ ಹಿನ್ನೆಲೆ  ಸಾಮಾನ್ಯವಾಗಿ ದೇವಸ್ಥಾನಗಳು ಬಂದ್‌ ಆಗಿರುತ್ತವೆ ಆದರೆ ಶೃಂಗೇರಿ ದೇವಸ್ಥಾನದಲ್ಲಿ ಪೂಜೆ ಮತ್ತು ದರ್ಶನಕ್ಕೆ ಅವಕಾಶವಿದೆ ಎಂದು ತಿಳಿಸಿಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments