Sunday, May 24, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ‘ಕಾಕ್ರೋಚ್ ಪಾರ್ಟಿಗೆ ಬಿಗ್ ಕೌಂಟರ್:‌ ಕಾಫಿನಾಡಲ್ಲಿ ಜನ್ಮತಾಳಿತು ‘ಲಕ್ಷ್ಮಣರೇಖೆ & ಹಿಟ್ ಪಾರ್ಟಿ’

ಚಿಕ್ಕಮಗಳೂರು: ‘ಕಾಕ್ರೋಚ್ ಪಾರ್ಟಿಗೆ ಬಿಗ್ ಕೌಂಟರ್:‌ ಕಾಫಿನಾಡಲ್ಲಿ ಜನ್ಮತಾಳಿತು ‘ಲಕ್ಷ್ಮಣರೇಖೆ & ಹಿಟ್ ಪಾರ್ಟಿ’

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ‘ಕಾಕ್ರೋಚ್ ಪಾರ್ಟಿ ಆಫ್ ಇಂಡಿಯಾ’ಗೆ ಪ್ರತಿಯಾಗಿ ಚಿಕ್ಕಮಗಳೂರಿನಲ್ಲಿ ‘ಲಕ್ಷ್ಮಣರೇಖೆ ಹಾಗೂ ಹಿಟ್ ಪಾರ್ಟಿ’ ಹುಟ್ಟಿಕೊಂಡಿದೆ. ಜಗದೀಶ್ಚಂದ್ರ ಎಂಬುವವರು ಸ್ಥಾಪಿಸಿದ ಈ ಪಾರ್ಟಿ, ಜಿರಲೆಗಳ ಹಾವಳಿಯನ್ನು ನಿಯಂತ್ರಿಸುವ ಘೋಷಣೆ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಯಾವುದಕ್ಕೆ ಯಾವಾಗ ಡಿಮ್ಯಾಂಡ್ ಬರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ‘ಕಾಕ್ರೋಚ್ ಪಾರ್ಟಿ ಆಫ್ ಇಂಡಿಯಾ’ ಎಂಬ ವಿಚಿತ್ರ ಹೆಸರಿನ ಟ್ರೆಂಡ್ ಸದ್ದು ಮಾಡುತ್ತಿದೆ. ಆದರೆ, ಈ ಜಿರಲೆಗಳ ಹಾವಳಿಗೆ ಬ್ರೇಕ್ ಹಾಕಲು ಈಗ ಕಾಫಿನಾಡಿನ ಮಲೆನಾಡಿಗರು ಸಜ್ಜಾಗಿದ್ದಾರೆ.

ನಮ್ಮ ದೇಶದಲ್ಲಿ ಈಗಾಗಲೇ ಕಾಕ್ರೋಚ್ ಜನತಾ ಪಾರ್ಟಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.ಕೇವಲ 5 ದಿನದಲ್ಲಿ 20 ಮಿಲಿಯನ್ ಗಿಂತ ಅಧಿಕ ಜನರು ಇನ್‌ಸ್ಟಾಗ್ರಾಂ ಫಾಲೋವರ್ಸ್‌ಗಳು ಆಗಿದ್ದಾರೆ. ಈ ಜಿರಲೆ ಪಾರ್ಟಿಗೆ ಕೌಂಟರ್ ಕೊಡಲು ಚಿಕ್ಕಮಗಳೂರಿನಲ್ಲಿ ‘ಲಕ್ಷ್ಮಣರೇಖೆ ಹಾಗೂ ಹಿಟ್ ಪಾರ್ಟಿ’ ಉದಯಿಸಿದೆ!

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಮೂಲದ ಜಗದೀಶ್ಚಂದ್ರ ಎಂಬುವವರು ಈ ವಿಭಿನ್ನ ‘ಹಿಟ್ ಪಾರ್ಟಿ’ಗೆ ಜನ್ಮ ನೀಡಿದ್ದಾರೆ. ಅಷ್ಟೇ ಅಲ್ಲದೆ, ಈ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಜಗದೀಶ್ಚಂದ್ರ ಅವರೇ ಆಯ್ಕೆಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜಿರಲೆ ಪಾರ್ಟಿಯ ಆರ್ಭಟ ಹೆಚ್ಚಾದ ಬೆನ್ನಲ್ಲೇ, ಅದನ್ನು ನಿಯಂತ್ರಿಸಲು ಜಿರಲೆ ನಾಶಕ ‘ಹಿಟ್’ ಮತ್ತು ‘ಲಕ್ಷ್ಮಣರೇಖೆ’ ಹೆಸರಿನಲ್ಲಿ ಈ ಹೊಸ ಸಂಘಟನೆ ಅಸ್ತಿತ್ವಕ್ಕೆ ಬಂದಿದೆ.

ಈ ಹಿಟ್ ಪಾರ್ಟಿ ಕೇವಲ ಹೆಸರಿಗೆ ಮಾತ್ರ ಸೀಮಿತವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನ ಈ ಪಾರ್ಟಿಯನ್ನು ಫಾಲೋ ಮಾಡಲು ಆರಂಭಿಸಿದ್ದಾರೆ. ‘ನಾವು ಜಿರಲೆಗಳಿಗೆ ಹೆದರುವುದಿಲ್ಲ, ಅವುಗಳನ್ನು ಮಟ್ಟಹಾಕಲು ನಮ್ಮ ಬಳಿ ಅಸ್ತ್ರಗಳಿವೆ’ ಎಂಬ ಸ್ಲೋಗನ್‌ಗಳು ವೈರಲ್ ಆಗುತ್ತಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!