ಏನಾದ್ರು ಸಾಧನೆ ಮಾಡಬೇಕು ಅನ್ನೋ ಮನಸ್ಸು ಇರೋರಿಗೆ ವಯಸ್ಸು ಯಾವುದೇ ಕಾರಣಕ್ಕೂ ಲೆಕ್ಕಕ್ಕೆ ಬರಲ್ಲ, ಅನ್ನೋದಿಕ್ಕೆ ಈ ಯುವಕನೇ ಸಾಕ್ಷಿ, ಕಾಲೇಜಿಗೆ ಹೋಗುವ ಸಮಯದಲ್ಲೇ ಈತ tvs xl 100 ಗಾಡಿಯನ್ನು ಈತನೇ ಸ್ವತಃ ನಿಂತು ಬ್ಯಾಟರಿ ಆಧಾರಿತ ಗಾಡಿಯಾಗಿ ಮಾಡಿದ್ದನೆ. ಹಾಗಿದ್ರೆ ಈ ಯುವಕ ಯಾರು ಈ ವಿಶೇಷ ಘಟನೆ ನೆಡೆದಿದ್ದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ….
4 ಗಂಟೆ ಚಾರ್ಜ್, 45km ಮೈಲೇಜ್
ಸದ್ಯ ದೇಶದ ತುಂಬಾ ಎಲೆಕ್ಟ್ರಿಕ್ ಗಾಡಿಗಳೆದ್ದು ಸದ್ದು, ಮೊದ ಮೊದಲು ಈ ಎಲೆಕ್ಟ್ರಿಕ್ ಗಾಡಿ ಬಂದಾಗ ಅಷ್ಟೊಂದು ತಲೆ ಕೆಡಿಸಿಕೊಳ್ಳದ ಜನ, ಈಗ ಎಲೆಕ್ಟ್ರಿಕ್ ಗಾಡಿಗಳತ್ತ ಒಲವು ತೋರಿಸುತ್ತಾ ಇದ್ದಾರೆ.
ಹೌದು ಈ ಎಲೆಕ್ಟ್ರಿಕ್ ಗಾಡಿಗಳ ಯುಗದಲ್ಲಿ ಚಿಕ್ಕಮಗಳೂರಿನ ಯುವಕನೊಬ್ಬ ಸ್ವತಃ ತಾನೆ ಖುದ್ದಾಗಿ ಬ್ಯಾಟರಿ ಗಾಡಿಯನ್ನು ತಯಾರಿಸಿ ಎಲ್ಲರ ಮನ ಗೆದಿದ್ದಾನೆ. ಚಿಕ್ಕಮಗಳೂರು ತಾಲ್ಲೂಕಿನ ಕುರುವಂಗಿ ಮೂಲದ ಸುನಿಲ್ ಸದ್ಯ ಚಿಕ್ಕಮಗಳೂರಲ್ಲಿ ಬ್ಯಾಟರಿ ಗಾಡಿ ತಯಾರಿಸಿ ತನ್ನದೇ ಆದ ಟ್ರೆಂಡ್ ಸೆಟ್ ಮಾಡಿದ್ದಾನೆ. ಚಿಕ್ಕಮಗಳೂರಲ್ಲಿ ಐ ಟಿ ಐ ಓದುತ್ತಿರುವ ಸುನಿಲ್ ಗೆ ಚಿಕ್ಕ ವಯಸ್ಸಿನಿಂದಲೂ ಸ್ವಂತಿಕೆ ಆಗಿ ಏನಾದ್ರು ತಯಾರಿ ಮಾಡ್ವೇಕು ಅನ್ಮೋ ಆಸೆ ಇತ್ತು ಹೀಗಾಗಿ ತನ್ನ TVS XL 100ಅನ್ನು ಸಂಪೂರ್ಣವಾಗಿ ಕಳಚಿ ಬ್ಯಾಟರಿ ಆಧಾರಿತ ಗಾಡಿಯನ್ನು ತಯಾರು ಮಾಡಿದ್ದಾನೆ. ಇನ್ನೂ ಈ ಗಾಡಿಯು ಸುಮಾರು 4 ಗಂಟೆ ಚಾರ್ಜ್ ಮಾಡಿದ್ರೆ 45KM ಮೈಲೇಜ್ ಕೊಡುತ್ತೆ ಅನ್ನೋದು ಆಶ್ಚರ್ಯ.

ಬೇರೆಯವರು ಮಾಡ್ತಾರೆ ಅನ್ನೋದಾದ್ರೆ ನಾವ್ ಯಾಕೆ ಮಾಡಬಾರದು ಅನ್ನೋದು ಹಾಗಾಗಿ ನಾನು ಕೂಡ ಈ ಗಾಡಿ ತಯಾರು ಮಾಡಿದೆ
ಲೋಕಲ್ 18 ಜೊತೆ ಮಾತಾಡಿರುವ ಸುನಿಲ್ ಅವರು ನಾನು ಈ ಹಿಂದೆ ನಾನು ಯೌಟ್ಯೂಬ್ ನೋಡುವಾಗ ತಮಿಳು ನಾಡಿನವರು ಈ ರೀತಿ ಗಾಡಿ ತಯಾರಿ ಮಾಡಿದ್ರು ಹಾಗಾಗಿ ಚಿಕ್ಕಮಗಳೂರಲ್ಲೂ ಕೂಡ ನಾನು ಮಾಡ್ತೀನಿ ಎಂದು ಈ ಗಾಡಿ ತಯಾರು ಮಾಡಿದ್ದೇನೆ. ಇನ್ನೂ ಈ ಗಾಡಿಗೆ ಸುಮಾರು 45ಸಾವಿರ ಖರ್ಚಾಗಿದ್ದು. ಇದಕ್ಕೆ ಬೇಕಾದ ಕೆಲವು ವಸ್ತುಗಳನ್ನು ದೆಹಲಿಯಿಂದ ತರಿಸಿಕೊಂಡಿದ್ದೇವೆ. ಇನ್ನೂ ಈ ಗಾಡಿಗೆ ಬಳಸಿರುವ ವಸ್ತುಗಳು ಅಂದ್ರೆ 750ವೋಲ್ಟ್ ಮೋಟಾರ್ ಹಾಗೆ 48 ವೋಲ್ಟ್ 30 h ಬ್ಯಾಟರಿಯನ್ನು ಉಪಯೋಗ ಮಾಡಿದ್ದು ವಿಶೇಷವಾಗಿದೆ. ಜೊತೆಗೆ ಇನ್ನೂ ಕಂಟ್ರೋಲರ್ ಆಗಿ 48 ವೋಲ್ಟ್ 10 ಅರ್ಮ್ಸ್ ಜೊತೆಗೆ 1000ವ್ಯಾಟ್ ಉಸ್ ಮಾಡಲಾಗಿದೆ

ಗುರು ಇದ್ರೆ ಎಂತಹ ಕೆಲಸ ಬೇಕಾದ್ರು ಮಾಡಬಹುದು ಅನ್ನೋದಿಕ್ಕೆ ಈ ಯುವಕನೇ ಸಾಕ್ಷಿ
ಸುನಿಲ್ ಈ ಗಾಡಿಯನ್ನು ತಯಾರಿಸುವ ಹಿಂದೆ ತಂದೆ ತಾಯಿಯ ಪ್ರೋತ್ಸಾಹ ಎಷ್ಟು ಇದೆಯೋ ಅಸ್ಟೆ ಬೆಂಬಲ ಕೊಟ್ಟಿದ್ದು ಪ್ರಸನ್ನ ಅವರು.
ಸುನಿಲ್ ಓದು ಮುಗಿಸಿ ಪಾರ್ಟ್ ಟೈಮ್ ಕೆಲಸ ಕೂಡ ಮಾಡ್ತಾನೆ ಇವನು ಕೆಲಸ ಮಾಡುವ ಮಾಲೀಕರಾದ ಪ್ರಸನ್ನ ಅವರು ಸುನಿಲನ ಬೆನ್ನ ಹಿಂದೆ ನಿಂತು ಆತನಿಗೆ ಬೇಕಾದ ವಸ್ತುಗಳನ್ನು ದೆಹಲಿಯಿಂದ ತರಿಸಲು ಕೂಡ ಸಹಾಯ ಮಾಡಿದ್ದಾರೆ. ಹಾಗಾಗಿ ಈ ಗಾಡಿ ತಯಾರಿಸಲು ಅವರು ನಂಗೆ ಗುರುಗಳ ರೀತಿಯಲ್ಲಿ ಎಂದು ಹೇಳಿದ್ದಾನೆ. ಇವತ್ತಿನ ಕಾಲದಲ್ಲಿ ಕೆಲಸ ಮಾಡಿಸಿಕೊಂಡು ಕಳಿಸುವರ ನಡುವೆ ಪ್ರಸನ್ನ ಅವರು ಸುನಿಲ್ ಗೆ ಬೆಂಬಲ ಕೊಟ್ಟು ಅವನಿಗೆ ಪ್ರೋತ್ಸಹ ಮಾಡಿದ ರೀತಿ ನಿಜಕ್ಕೂ ಶ್ಲಾಘನೀಯ.

