Monday, August 17, 2026
Homeಕ್ರೈಮ್ಚಿಕ್ಕಮಗಳೂರು: ಸಾಲಬಾಧೆಗೆ ರೈತ ನೇಣಿಗೆ ಶರಣು!

ಚಿಕ್ಕಮಗಳೂರು: ಸಾಲಬಾಧೆಗೆ ರೈತ ನೇಣಿಗೆ ಶರಣು!

Telegram Group
Join Now

ಬೀರೂರು: ಕೃಷಿ ಚಟುವಟಿಕೆಗಳಿಗೆ ಮಾಡಿದ್ದ ಸಾಲ ತೀರಿಸಲು ಸಾಧ್ಯವಾಗದೇ ರೈತನೊಬ್ಬ ನೇಣಿಗೆ ಶರಣಾದ ಘಟನೆ ಬೀರೂರು ಸಮೀಪದ ದೋಗಿಹಳ್ಳಿಯಲ್ಲಿ ವರದಿಯಾಗಿದೆ.

ಮೂಲತಃ ಜೋಡಿತಿಮ್ಮಾಪುರದವರಾದ ಮಧು ಆರ್‌. (29) ಮೃತಪಟ್ಟ ರೈತ. ಗ್ರಾಮದಲ್ಲಿ ಕೃಷಿ ಜಮೀನಿದ್ದು ಮಧು ಕೃಷಿ ಕೆಲಸ ಮಾಡಿಕೊಂಡಿದ್ದರು.

ಜತೆಗೆ ದೋಗಿಹಳ್ಳಿಯಲ್ಲಿನ ಮಾವನ ಕುಟುಂಬದಲ್ಲಿನ ಜಮೀನುಗಳನ್ನು ಕೂಡ ನಿರ್ವಹಣೆ ಮಾಡುತ್ತಿದ್ದರು. ಕೃಷಿ ಚಟುವಟಿಕೆಗಾಗಿ ಹಣಕಾಸು ಸಂಸ್ಥೆ, ಮೈಕ್ರೊ ಫೈನಾನ್ಸ್‌ಗಳಲ್ಲಿ ಸೇರಿದಂತೆ ಗ್ರಾಮಸ್ಥರಿಂದಲೂ ಕೈಸಾಲ ಪಡೆದಿದ್ದರು.

ದೋಗಿಹಳ್ಳಿಗೆ ಬಂದಿದ್ದ ಮಧು ಸೋಮವಾರ ರಾತ್ರಿ ಜೋಡಿತಿಮ್ಮಾಪುರಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೊರಗೆ ಬಂದಿದ್ದರು. ಮಂಗಳವಾರ ಬೆಳಿಗ್ಗೆ ಮೃತನ ಅತ್ತೆ ಸಾಕಮ್ಮ ಮನೆಯ ಹಿಂದಿನ ಶೆಡ್‌ನಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿರುವ ಸ್ಥಿತಿಯಲ್ಲಿ ಮಧು ಅವರ ಶವ ಪತ್ತೆಯಾಗಿದೆ.

ಪತ್ನಿ ಅಶ್ವಿನಿ ನೀಡಿದ ದೂರಿನ ಅನುಸಾರ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments