Friday, March 27, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಉಚಿತ ಆರೋಗ್ಯ ತಪಾಸಣಾ ಶಿಬಿರ: ಸ್ಟ್ರೋಕ್‌ ಬಗ್ಗೆ ಇರಲಿ ಜಾಗೃತಿ!

ಚಿಕ್ಕಮಗಳೂರು: ಉಚಿತ ಆರೋಗ್ಯ ತಪಾಸಣಾ ಶಿಬಿರ: ಸ್ಟ್ರೋಕ್‌ ಬಗ್ಗೆ ಇರಲಿ ಜಾಗೃತಿ!

ಚಿಕ್ಕಮಗಳೂರು: ಕರ್ನಾಟಕ ಆರೋಗ್ಯ ಉಪಕ್ರಮ ಹಾಗೂ ಲಯನ್ಸ್ ಸಂಸ್ಥೆ ಇವರ ಸಹಯೋಗದಲ್ಲಿ ವರ್ಲ್ಡ್ ಸ್ಟ್ರೋಕ್ ಡೇ ಪ್ರಯುಕ್ತ ಪ್ರಥಮ ಬಾರಿಗೆ ಉಚಿತ ಸ್ಟ್ರೋಕ್ ಜಾಗೃತಿ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಅ.26 ರಂದು ಭಾನುವಾರ ಬೆಳಿಗ್ಗೆ10.30 ರಿಂದ ಮಧ್ಯಾಹ್ನ 2.30 ರವರೆಗೆ ಮಧುವನ ಲೇಔಟ್‌ನಲ್ಲಿರುವ ಲಯನ್ಸ್ ಸೇವಾ ಭವನದಲ್ಲಿ ನಡೆಯುತ್ತಿದೆ.

ಹೌದು.. ಲಯನ್ಸ್ ಸಂಸ್ಥೆ ಸಂಯೋಜಕ ಜಿ.ರಮೇಶ್, ಈ ಶಿಬಿರದಲ್ಲಿ ನ್ಯೂರೋಲಾಜಿಸ್ಟ್‌ರವರಿಂದ ನೇರ ಆರೋಗ್ಯ ತಪಾಸಣೆ ಮತ್ತು ಸಲಹೆ, ಸ್ಟ್ರೋಕ್ ಲಕ್ಷಣಗಳು, ಕಾರಣಗಳು ಹಾಗೂ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದರು.

ಹೃದಯ ಮತ್ತು ಮೆದುಳಿನ ರಕ್ತನಾಳದ ತಪಾಸಣೆ ಕುರಿತು ಮಾಹಿತಿ, ಸ್ಟ್ರೋಕ್ ನಂತರ ಪುನಶ್ಚೇತನ ಕುರಿತು ಮಾರ್ಗದರ್ಶನ, ರಕ್ತದೊತ್ತಡ, ಸಕ್ಕರೆ, ಕೊಲೆಸ್ಟ್ರಾಲ್, ತೂಕ, ಬಿಎಂಐ ತಪಾಸಣೆಯನ್ನು ಉಚಿತವಾಗಿ ಮಾಡಲಾಗುವುದೆಂದು ಮಾಹಿತಿ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!