Tuesday, February 10, 2026
Homeಕ್ರೈಮ್‌ಚಿಕ್ಕಮಗಳೂರು: ಅಕ್ರಮವಾಗಿ ವೃದ್ಧಾಪ್ಯ ವೇತನ ಮಂಜೂರು: ಕಂದಾಯ ಇಲಾಖೆಯ 8 ಮಂದಿ ಅಧಿಕಾರಿಗಳು ಸಸ್ಪೆಂಡ್!

‌ಚಿಕ್ಕಮಗಳೂರು: ಅಕ್ರಮವಾಗಿ ವೃದ್ಧಾಪ್ಯ ವೇತನ ಮಂಜೂರು: ಕಂದಾಯ ಇಲಾಖೆಯ 8 ಮಂದಿ ಅಧಿಕಾರಿಗಳು ಸಸ್ಪೆಂಡ್!

ಚಿಕ್ಕಮಗಳೂರು: ಕಡೂರು ತಾಲ್ಲೂಕಿನಲ್ಲಿ ಮಧ್ಯ ವಯಸ್ಸಿನವರಿಗೆ ಅಕ್ರಮವಾಗಿ ವೃದ್ಧಾಪ್ಯ ವೇತನ ಮಂಜೂರು ಮಾಡಿರುವ ಆರೋಪದಲ್ಲಿ ಕಂದಾಯ ಇಲಾಖೆಯ ಎಂಟು ಮಂದಿ ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ನಾಡ ಕಚೇರಿ ವಿಷಯ ನಿರ್ವಾಹಕ ಗಿರೀಶ್, ಕಂದಾಯ ಅಧಿಕಾರಿ ಪಿ.ಆರ್.ರವಿಕುಮಾರ್, ಗ್ರಾಮ ಆಡಳಿತಾಧಿಕಾರಿಗಳಾದ ನಿರ್ಮಲಾ ಟಿ.ಎಸ್., ಹನುಮಂತಪ್ಪ ಆರ್., ರವಿ ಕೆ.ಆರ್., ಲಿಂಗರಾಜು ಕೆ.,ಕಾವ್ಯಾ ಟಿ.ಎಂ., ಕುಮಾರ್ ಜೆ.ಎಂ. ಅವರನ್ನು ಅಮಾನತು ಮಾಡಲಾಗಿದೆ.

ಎನ್‌.ಕೆ.(ನಾಡ ಕಚೇರಿ)–5 ತಂತ್ರಾಂಶದಲ್ಲಿ ಅಕ್ರಮವಾಗಿ 64 ಜನರಿಗೆ ಪಿಂಚಣಿ ಮಂಜೂರು ಮಾಡಿ ಸರ್ಕಾರಕ್ಕೆ ₹9.03 ಲಕ್ಷ ನಷ್ಟ ಮಾಡಿದ್ದಾರೆ ಎಂದು ತಹಶೀಲ್ದಾರ್ ವರದಿಯಲ್ಲಿ ತಿಳಿಸಿ ದ್ದರು. ಅದನ್ನು ಆಧರಿಸಿ ತನಿಖೆ ನಡೆಸಿದ್ದ ಕಂದಾಯ ಇಲಾಖೆ, 11 ಜನರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು.

ಕಡೂರು ತಹಶೀಲ್ದಾರ್ ಇತ್ತೀಚೆಗೆ ಮತ್ತೊಂದು ವರದಿಯನ್ನು ಸಲ್ಲಿಸಿದ್ದು, ಕಡೂರು ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ  ಎನ್.ಕೆ.–4 ತಂತ್ರಾಂಶದಲ್ಲೂ 1,485 ಅನರ್ಹರಿಗೆ ಅಕ್ರಮವಾಗಿ ಪಿಂಚಣಿ ಮಂಜೂರಾಗಿ ಸರ್ಕಾರಕ್ಕೆ ₹2.17 ಕೋಟಿ ನಷ್ಟವಾಗಿದೆ ಎಂದು ಉಲ್ಲೇಖಿಸಿದ್ದರು.

ಈ ಪ್ರಕರಣಗಳಲ್ಲಿ ಯಾವ ಅಧಿಕಾರಿಗಳ ಎಲ್ಲೆಲ್ಲಿ ಕರ್ತವ್ಯಲೋಪ ಎಸಗಿದ್ದಾರೆ. ಯಾರಿಂದ ಎಷ್ಟು ನಷ್ಟ ಆಗಿದೆ ಎಂದು ಕೂಲಂಕಷವಾಗಿ ಪರಿಶೀಲಿಸಿರುವ ಜಿಲ್ಲಾಧಿಕಾರಿ ಮೀನಾ ನಾಗರಾಜ್, 8 ಸಿಬ್ಬಂದಿ ಅಮಾನತು ಮಾಡಿ ಆದೇಶಿಸಿದ್ದಾರೆ. ಶಿರಸ್ತೇದಾರ್ ಕಲ್ಮರುಡಪ್ಪ ಅವರನ್ನು ಈ ಹಿಂದೆಯೇ ಅಮಾನತು ಮಾಡಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!