ಚಿಕ್ಕಮಗಳೂರು: ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಪ್ಲೆಕ್ಸ್ ಅಳವಡಿಕೆ ವಿಚಾರವು ಸಾವಿನೊಂದಿಗೆ ಗಲಭೆಯಾಗಿ ಮಾರ್ಪಟ್ಟಿರುವುದು ಅತ್ಯಂತ ದುರಾದೃಷ್ಟಕರ ಸಂಗತಿಯಾಗಿದ್ದು, ಈ ಪ್ರಕರಣದ ಹಿಂದೆ ಬ್ಯಾನರ್ ನೆಪವಷ್ಟೇ ಇರಬಹುದು ಮತ್ತು ಇದರ ಹಿಂದೆ ಬೇರೆ ಉದ್ದೇಶಗಳಿರುವ ಸಾಧ್ಯತೆಗಳಿವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಶಾಸಕ ಜನಾರ್ದನ ರೆಡ್ಡಿ ‘ನನ್ನ ಹತ್ಯೆ ಮಾಡಲು ಬಂದಿದ್ದಾರೆ’ ಎಂಬ ಹೇಳಿಕೆಯನ್ನು ಪ್ರಸ್ತಾಪಿಸಿರುವ ರವಿ, ಬಲಾಬಲ ಪ್ರದರ್ಶನಕ್ಕಾಗಿ ರೆಡ್ಡಿಯವರ ಮನೆ ಬಳಿ ಹೋದ ಸರ್ಕಾರದ ಕ್ರಮವನ್ನು ಹೇಗೆ ಸಮರ್ಥಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದರು. ಒಂದು ವೇಳೆ ಅನುಮತಿ ಪಡೆದು ಬ್ಯಾನರ್ ಹಾಕಿದ್ದರೆ ಅದನ್ನು ತೆರವುಗೊಳಿಸುವುದು ತಪ್ಪು, ಇಲ್ಲದಿದ್ದರೆ ದೂರು ನೀಡಬಹುದಿತ್ತು. ಈ ತನಿಖೆಯಲ್ಲಿ ಯಾವುದೇ ಪೂರ್ವಗ್ರಹ ಪೀಡಿತ ಅಥವಾ ದ್ವೇಷದ ರಾಜಕಾರಣ ವ್ಯಕ್ತವಾಗಬಾರದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.
ವಾಲ್ಮೀಕಿ ಜಯಂತಿಯನ್ನು ಆರಂಭಿಸಿದ್ದೇ ಬಿಜೆಪಿ ಸರ್ಕಾರ ಎಂದು ನೆನಪಿಸಿದರು. ಕಾಂಗ್ರೆಸ್ ಹಿಂದೆ ಸುಪ್ರೀಂ ಕೋರ್ಟ್ಲ್ಲಿ ರಾಮನ ಅಸ್ತಿತ್ವವನ್ನೇ ನಿರಾಕರಿಸುವ ಮೂಲಕ ಪರೋಕ್ಷವಾಗಿ ವಾಲ್ಮೀಕಿಯವರ ಅಸ್ತಿತ್ವವನ್ನು ನಿರಾಕರಿಸುವ ಕೆಲಸ ಮಾಡಿತ್ತು. ತನಿಖೆಯಲ್ಲಿ ಯಾವುದೇ ಪೂರ್ವಗ್ರಹ ಪೀಡಿತ ಅಥವಾ ದ್ವೇಷದ ರಾಜಕಾರಣ ವ್ಯಕ್ತವಾಗಬಾರದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.
