Thursday, August 13, 2026
Homeಕ್ರೈಮ್ಚಿಕ್ಕಮಗಳೂರು: ಮದ್ವೆಗೂ ಮುಂಚೆ ಪ್ರಗ್ನೆಂಟ್: ಮಗು ಹುಟ್ಟಿದ ಮರುಕ್ಷಣವೇ ಕತ್ತು ಹಿಸುಕಿ ಕೊಂದ ಪಾಪಿಗಳು!

ಚಿಕ್ಕಮಗಳೂರು: ಮದ್ವೆಗೂ ಮುಂಚೆ ಪ್ರಗ್ನೆಂಟ್: ಮಗು ಹುಟ್ಟಿದ ಮರುಕ್ಷಣವೇ ಕತ್ತು ಹಿಸುಕಿ ಕೊಂದ ಪಾಪಿಗಳು!

Telegram Group
Join Now

ಚಿಕ್ಕಮಗಳೂರು: ಮದುವೆಗೆ ಮುಂಚೆಯೇ ಗರ್ಭಿಣಿಯಾಗಿದ್ದ ಯುವತಿಯೊಬ್ಬಳು, ಮಗುವಿಗೆ ಜನ್ಮ ನೀಡುತ್ತಿದ್ದಂತೆ ಕತ್ತು ಹಿಸುಕಿ ಕೊಂದಿರುವ ಆರೋಪ ಲಕ್ಕವಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕೇಳಿ ಬಂದಿದೆ.

ಸ್ಟಾಫ್ ನರ್ಸ್ ಆಗಿ ಕೆಲಸ ಮಾಡ್ತಿದ್ದ ಯುವತಿ, ತನ್ನ ತಂದೆ, ತಾಯಿ, ಅಜ್ಜಿ ಹಾಗೂ ಮೂವರು ಮಹಿಳೆಯರ ಸಹಾಯದಿಂದ ಮನೆಯಲ್ಲೇ ಹೆರಿಗೆ ಮಾಡಿಕೊಂಡಿದ್ದಾಳೆ. ಗಂಡು ಮಗು ಜನಿಸುತ್ತಿದ್ದಂತೆಯೇ ಅಪ್ಪ, ಅಮ್ಮ ಹಾಗೂ ಅಜ್ಜಿ ಸೇರಿ ಒಂದೇ ನಿಮಷದಲ್ಲಿ ಕೊಂದು, ತಿಪ್ಪೆಯಲ್ಲಿ ಹೂತು ಬಂದಿದ್ದಾರೆ. 15 ದಿನಗಳ ಹಿಂದೆ ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪಕ್ಕದ ಮನೆ ಯುವಕನಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಮಗು ಹುಟ್ಟಿದ ಕೂಡಲೇ ಅನುಮಾನಾಸ್ಪದ ಸಾವು ಎಂದು ಲಕ್ಕವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments