Wednesday, March 25, 2026
Homeಕ್ರೈಮ್ಚಿಕ್ಕಮಗಳೂರು: ಅಪರಿಚಿತರಿಂದ ಬೈಕ್‌ ಅಡ್ಡಗಟ್ಟಿ ಚಿನ್ನದ ಸರ ಕಸಿದು ಪರಾರಿ!

ಚಿಕ್ಕಮಗಳೂರು: ಅಪರಿಚಿತರಿಂದ ಬೈಕ್‌ ಅಡ್ಡಗಟ್ಟಿ ಚಿನ್ನದ ಸರ ಕಸಿದು ಪರಾರಿ!

ಬೀರೂರು:  ತೋಟದ ಕೆಲಸಕ್ಕೆ ತೆರಳುತ್ತಿದ್ದ ಬೈಕ್‌ ಸವಾರನ್ನು ಮತ್ತೊಂದು ಬೈಕ್‌ನಲ್ಲಿ ಬಂದ ಮೂವರು ಅಪರಿಚಿತರು ಅಡ್ಡಗಟ್ಟಿ ಚಾಕು ಹಾಗೂ ರಾಡ್‌ನಿಂದ ಹಲ್ಲೆ ನಡೆಸಿ ಆತನ ಬಳಿ ಇದ್ದ ಚಿನ್ನದ ಸರ ಕಸಿದು ಪರಾರಿಯಾದ ಘಟನೆ ಬೀರೂರು ಹೊರವಲಯದ ಉಳ್ಳಿನಾಗೂರು ರಸ್ತೆಯಲ್ಲಿ ನಡೆದಿದೆ.

ಗೋವಿಂದನಾಯ್ಕ ಎಂಬುವವರು ಉಳ್ಳಿನಾಗೂರು ರಸ್ತೆಯಲ್ಲಿ ರೈಲ್ವೆ ಗೇಟ್‌ ದಾಟಿ, ಟವರ್‌ ಬಳಿ ಸಾಗುತ್ತಿದ್ದ ಸಂದರ್ಭದಲ್ಲಿ ಇನ್ನೊಂದು ಬೈಕ್‌ನಲ್ಲಿ ಬಂದ ಮೂವರು ಸ್ವಲ್ಪ ಮುಂದೆ ಹೋಗಿ ಬೈಕ್‌ ನಿಲ್ಲಿಸಿಕೊಂಡಿದ್ದಾರೆ.

ಅದರಲ್ಲಿ ಇಬ್ಬರು ಇಳಿದಿದ್ದು ಗೋವಿಂದನಾಯ್ಕ ನೀವು ಎಲ್ಲಿಗೆ ಹೋಗಬೇಕು ಎಂದು ವಿಚಾರಿಸಿದಾಗ ನಾವು ವಾಪಸ್‌ ಹೋಗುತ್ತೇವೆ ಎಂದು ಹೇಳುವ ಹೊತ್ತಿಗೆ ಸ್ಟಾರ್‌ಸಿಟಿ ಬೈಕ್‌ನಲ್ಲಿದ್ದ ಇನ್ನೊಬ್ಬ ಬೈಕನ್ನು ತಿರುಗಿಸಿಕೊಂಡು ಎದುರಾಗಿದ್ದಾನೆ.

ಇದೇ ವೇಳೆ ಈ ಮೊದಲೇ ಕೆಳಗೆ ಇಳಿದಿದ್ದವರಲ್ಲಿ ಒಬ್ಬ ಚಾಕು ಮತ್ತು ಇನ್ನೊಬ್ಬ ರಾಡ್‌ ಹಿಡಿದುಕೊಂಡು ನಿನ್ನ ಬಳಿ ಏನಿದೆ ತೆಗಿ ಎಂದು ಬೆದರಿಸಿದ್ದಾನೆ. ಚಾಕು ಹಿಡಿದವನು ಏಕಾಏಕಿ ಕುತ್ತಿಗೆಗೆ ಕೈಹಾಕಿ 12 ಗ್ರಾಂ ತೂಕದ ಚೈನ್‌ ಅನ್ನು ಕಿತ್ತುಕೊಳ್ಳುವ ಸಂದರ್ಭದಲ್ಲಿ ಗೋವಿಂದನಾಯ್ಕ ಪ್ರತಿರೋಧ ತೋರಿದ್ದಕ್ಕೆ ಚಾಕುವಿನಿಂದ ಭುಜಕ್ಕೆ ತಿವಿದರೆ ಇನ್ನೊಬ್ಬ ರಾಡ್‌ನಿಂದ ತಲೆಗೆ ಹೊಡೆದಿದ್ದಾನೆ.

ಬಳಿಕ ಬೈಕ್‌ ಸವಾರರು ರೈಲ್ವೆ ಹಳಿ ಕಡೆ ತೆರಳಿದಾಗ ಸಂತ್ರಸ್ತನು ಕೂಗಾಡಿಕೊಂಡು ಹೋದರೂ ಪರಾರಿಯಾಗಿದ್ದಾರೆ. ಗಾಬರಿಯಲ್ಲಿ ಬೈಕ್‌ ನಂಬರು ನೋಡಲು ಸಾಧ್ಯವಾಗಿಲ್ಲ ಎಂದು ಗಾಯಾಳು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!