Wednesday, August 12, 2026
Homeಕ್ರೈಮ್ಕಡೂರು: ಬೈಕ್‌ - ಸ್ಕೂಟಿ ನಡುವೆ ಡಿಕ್ಕಿ: ಬೈಕ್‌ ಸವಾರ ಸ್ಥಳದಲ್ಲೇ ಸಾವು!

ಕಡೂರು: ಬೈಕ್‌ – ಸ್ಕೂಟಿ ನಡುವೆ ಡಿಕ್ಕಿ: ಬೈಕ್‌ ಸವಾರ ಸ್ಥಳದಲ್ಲೇ ಸಾವು!

Telegram Group
Join Now

ಕಡೂರು: ತಾಲ್ಲೂಕಿನ ದೇವನೂರು ಸಮೀಪ ಸಖರಾಯಪಟ್ಟಣ- ಬಾಣಾವರ ರಸ್ತೆಯಲ್ಲಿ ಬೈಕ್‌ ಮತ್ತು ಸ್ಕೂಟಿಯ ಡಿಕ್ಕಿ ಸಂಭವಿಸಿ ಬೈಕ್‌ ಸವಾರ ಲಕ್ಷ್ಮೀಶ (35) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಸಮೀಪದ ಚಿಕ್ಕಣ್ಣನ ಕೊಪ್ಪಲಿನಿಂದ ಚಿಕ್ಕದೇವನೂರಿಗೆ ತೆರಳುತ್ತಿದ್ದ ಲಕ್ಷ್ಮೀಶ ಚಾಲನೆ ಮಾಡುತ್ತಿದ್ದ ಬೈಕ್‌ಗೆ ಟಿ.ಬಿ. ಕಾವಲಿನ ಆನಂದ ನಾಯ್ಕ ಎಂಬುವರು ಚಾಲನೆ ಮಾಡುತ್ತಿದ್ದ ಸ್ಕೂಟಿ ಡಿಕ್ಕಿಯಾಗಿದೆ.

ಲಕ್ಷ್ಮೀಶ ಅವರಿಗೆ ತೀವ್ರಪೆಟ್ಟು ಬಿದ್ದು ಸಾವನ್ನಪ್ಪಿದ್ದರೆ, ಸ್ಕೂಟಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments