Saturday, August 8, 2026
Homeಕ್ರೈಮ್ಚಿಕ್ಕಮಗಳೂರು: ಜಿಲ್ಲೆಗೆ ಮಾರ್ಚ್ 18ರ ವರೆಗೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆ!

ಚಿಕ್ಕಮಗಳೂರು: ಜಿಲ್ಲೆಗೆ ಮಾರ್ಚ್ 18ರ ವರೆಗೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆ!

Telegram Group
Join Now

ಚಿಕ್ಕಮಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪ್ರಭಾವದಿಂದಾಗಿ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಸೋಮವಾರ ಹಲವೆಡೆ ಮಳೆಯಾಗಿದೆ. 

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಮಾರ್ಚ್ 18ರ ವರೆಗೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ಇದೆ. ಮಾರ್ಚ್ 19ರಿಂದ 21ರವರೆಗೆ ವಾತಾವರಣವು ಭಾಗಶಃ ಮೋಡದಿಂದ ಕೂಡಿದ್ದು, ಹಗುರ ಮಳೆಯಾಗುವ ಸಂಭವವಿದೆ ಎಂದು ತಿಳಿಸಿದೆ. 

ಈ ಅವಧಿಯಲ್ಲಿ ಗರಿಷ್ಠ ತಾಪಮಾನವು 29°C ಇರಲಿದ್ದು, ಕನಿಷ್ಠ ತಾಪಮಾನವು 16°C ವರೆಗೆ ದಾಖಲಾಗುವ ಮೂಲಕ ವಾತಾವರಣವು ತಂಪಾಗಿರಲಿದೆ. ಮಾರ್ಚ್ 22ರ ನಂತರ ಜಿಲ್ಲೆಯಲ್ಲಿ ಮತ್ತೆ ಬಿಸಿಲಿನ ಝಳ ಹೆಚ್ಚಾಗಲಿದ್ದು, ತಾಪಮಾನವು 31°C ದಾಟುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments