ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯದತ್ತ ಓಡಿಸುವ ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಚಿಕ್ಕಮಗಳೂರು ಜಿಲ್ಲೆಯ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ.ಈ ಸಂಬಂಧ ಶಾಸಕರಾದ ನಯನಾ ಮೋಟಮ್ಮ , HD ತಮ್ಮಯ್ಯ, ಟಿಡಿ ರಾಜೇಗೌಡ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಗಮನಕ್ಕೆ ಇಲ್ಲದೇ ಕಾಡಾನೆಗಳನ್ನ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಪತ್ರಿಕಾಗೋಷ್ಠಿಯಲ್ಲಿ ನಯನಾ ಮೋಟಮ್ಮ ಮಾತನಾಡಿ ಆನೆಗಳನ್ನ ನಮ್ಮ ಕಡೆ ಓಡೊಸೋದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ ನಮಗೆ ಡ್ರೈವ್ ಮಾಡೋದಿಲ್ಲ ಎಂದು ಹೇಳಿ ಮತ್ತೆ ಮಾಡಿದ್ದಾರೆ 25ಕ್ಕೆ ಸಭೆ ಕರೆದು ಹೇಗೆ ಡ್ರೈವ್ ಮಾಡಿದ್ರಿ ಎಂದು ಪ್ರಶ್ನಿಸಿದ್ದೇನೆ ಹಾಗೆ ಸಭೆಯಲ್ಲಿ ಹಾಸನ ಚಿಕ್ಕಮಗಳೂರು ಶಾಸಕರು ಅಧಿಕಾರಿಗಳು ಭಾಗಿಯಾಗ್ಬೇಕಿತ್ತು. ಆದ್ರೆ ಯಾವುದೇ ಮಾಹಿತಿ ನೀಡದೆ ಕಾಡಾನೆ ಓಡಿಸಿದ್ದಾರೆ. ACCF ನೇತೃತ್ವದಲ್ಲಿ ಕಾರ್ಯಚರಣೆ ಮಾಡಲಾಗಿದೆ. ಯಾವುದೇ ಸಮ್ಮತಿ ಇಲ್ಲದೆ ಕಾರ್ಯಚರಣೆ ಮಾಡಿದ್ದಾರೆ. pccf ,accf ಗೆ ನಾನು ಮೆಸೇಜ್ ಮಾಡಿದ್ದೇನೆ. ನಾನು ಇದನ್ನ ಒಪ್ಪಲು ಸಾಧ್ಯವಿಲ್ಲ. ನಾನು ರಾಜೀನಾಮೆ ನೀಡುವುದಾಗಿ ಮೆಸೇಜ್ ಮಾಡಿದ್ದೆ ಎಂದಿದ್ದಾರೆ.ರಾಜೀನಾಮೆ ಪತ್ರ ಸಿದ್ದವಿದೆ. ನಾನು ರಾಜೀನಾಮೆ ನೀಡಲು ಸಿದ್ದ. ಈ ಕಾರ್ಯಚರಣೆ ನಿಲ್ಲಿಸಬೇಕು, ಇಲ್ಲವೇ ರಾಜೀನಾಮೆ ನೀಡುತ್ತೇನೆ. ಚಿಕ್ಕಮಗಳೂರು ಜನರ ಜೀವಕ್ಕೆ ಬೆಲೆ ಇಲ್ವಾ? ನನಗೆ ಜನ ಮುಖ್ಯ ,ಸರ್ಕಾರವಲ್ಲ. ರಾತ್ರಿ ಎಲ್ಲಿಂದ ಕಾಡಾನೆ ಬಂದಿವೆಯೋ ಅಲ್ಲಿಗೆ ವಾಪಸ್ ಹೋಗಬೇಕು. ಇಲ್ಲವಾದಲ್ಲಿ ಬೆಳಗ್ಗೆ ರಾಜೀನಾಮೆ ನೀಡುವುದಾಗಿ ಪತ್ರವನ್ನು ಪ್ರದರ್ಶಿಸಿ ಎಚ್ಚರಿಕೆ ನೀಡಿದರು.
ಆ ನಂತರ ಈ ಸುದ್ದಿಗೋಷ್ಠಿಯಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಶೃಂಗೇರಿ ಕ್ಷೇತ್ರದಲ್ಲಿ 13 ಜನ ಸಾವನ್ನಪ್ಪಿದ್ದರೆ, ಮೂಡಿಗೆರೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇದರ ನಡುವೆ ಹಾಸನದಲ್ಲಿ 54 ಕಾಡಾನೆಗಳನ್ನ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರ ಮಾಡುವ ಆಪರೇಷನ್ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಆನೆಗಳ ಸ್ಥಳಾಂತರವನ್ನು ನಾವು ಒಪ್ಪಲ್ಲ. ನಮ್ಮ ಭಾಗಕ್ಕೆ ಹೊರಗಿನಿಂದ ಕಾಡಾನೆ ಸ್ಥಳಾಂತರವನ್ನು ಒಪ್ಪುವುದಿಲ್ಲ. ಭದ್ರಾ ಅಭಯಾರಣ್ಯದಲ್ಲಿ ಸಾಕಷ್ಟು ಪ್ರಾಣಿಗಳಿವೆ. ಭದ್ರಾ ಅಭಯಾರಣ್ಯ 492 ಚದರ ಕಿಲೋ ಮೀಟರ್ ವಿಸ್ತೀರ್ಣವಿದೆ. ರಾಜ್ಯದಲ್ಲಿ ಇದಕ್ಕಿಂತಲೂ ಹೆಚ್ಚು ದೊಡ್ಡದಾದ ಅರಣ್ಯ ಪ್ರದೇಶವಿದೆ. ಅದನ್ನೆಲ್ಲ ಬಿಟ್ಟು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರ ಮಾಡುವುದೇಕೆ? ಕಾರ್ಯಾಚರಣೆ ನಿಲ್ಲಿಸಲು ಅರಣ್ಯ ಮಂತ್ರಿ ಆದೇಶಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಕಾಡಾನೆ ಸ್ಥಳಾಂತರ ಮುಂದುವರಿದರೆ ಎಲ್ಲಾ ತ್ಯಾಗಕ್ಕೂ ನಾವು ಸಿದ್ಧ ಎಂದು ಸ್ಪಷ್ಟಪಡಿಸಿದರು.
ಇನ್ನೂ ಶಾಸಕ HD ತಮ್ಮಯ್ಯ ಮಾತನಾಡಿ ನಮ್ಮ ಮೂರು ಶಾಸಕರ ತೀರ್ಮಾನ ಒಂದೇ ನಮಗೆ ಜನರ ಜೀವ ಮುಖ್ಯ, ಅಧಿಕಾರ ಮುಖ್ಯ ಅಲ್ಲ ಇಂದು ರಾತ್ರಿ ಆನೆಗಳು ಬೇಲೂರಿಗೆ ವಾಪಸ್ ಹೋಗಬೇಕು ಇಲ್ಲವಾದರೆ, ನಾಳೆ ನಾವು ಮೂರು ಜನ ರಾಜೀನಾಮೆ ನೀಡುತ್ತೇವೆ ಸರ್ಕಾರದಿಂದ ಜನ ಅಲ್ಲ, ಜನರಿಂದ ಸರ್ಕಾರ, ನಾವು ಆನೆಗಳು ವಾಪಸ್ ಹೋಗದಿದ್ರೆ ರಾಜೀನಾಮೆ ಕೊಟ್ಟೇ ಕೊಡ್ತೀವಿ ಎಂದು ಖಡಕ್ ಎಚ್ಚರಿಕೆ ನೀಡಿದರು.
ಒಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂವರು ಶಾಸಕರು ಭದ್ರಾ ಅಭಯಾರಣ್ಯದತ್ತ ಓಡಿಸುವ ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ. ಇದರ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್ ಸರ್ಕಾರವು ಹೇಗೆ ನಿಭಾಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
